ಉಳ್ಳಾಲ ಹಝ್ರತ್ ಸಯ್ಯಿದ್ ಮದನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ
Friday, July 19, 2024
ಉಳ್ಳಾಲ ಹಝ್ರತ್ ಸಯ್ಯಿದ್ ಮದನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ
#################
20204 -25 ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ 10 ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಶಾಫಿ ಶಾಲಾ ನಾಯಕನಾಗಿ ಹಾಗೂ ಆಯಿಶ ನಹಲ ಶಾಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹಝ್ರತ್ ಸೈಯ್ಯದ್ ಮದನಿ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ ಇಮ್ತಿಯಾಝ್ ಪಿ. ಬಿ ರವರು ಆಯ್ಕೆಯಾದ ನಾಯಕರಿಗೆ ಹಾಗೂ ಎಲ್ಲಾ ಮಂತ್ರಿಗಳಿಗೆ ಪ್ರಮಾಣವಚನ ಬೋಧಿಸಿದರು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರಸೂಲ್ ಖಾನ್ ರವರು ಮಕ್ಕಳಿಗೆ ಚುನಾವಣಾ ವ್ಯವಸ್ಥೆಯ ಮಹತ್ವ ಹಾಗೂ ಆಯ್ಕೆಗೊಂಡ ಅಭ್ಯರ್ಥಿಗಳ ಜವಾಬ್ದಾರಿಯ ಕುರಿತು ಮಾತನಾಡಿದರು.
ಸಂಸ್ಥೆಯ ಅರಬಿಕ್ ಪ್ರಾಧ್ಯಾಪಕರಾದ ಮೊಹಮ್ಮದ್ ಆಶಿರ್ ಕಾರ್ಯಕ್ರಮ ನಿರೂಪಿಸಿದರು. ಪ್ರೌಢ ಶಾಲಾ ವಿಭಾಗದ ಸಹ ಮುಖ್ಯಶಿಕ್ಷಕಿ ಶ್ರೀಮತಿ ಗೀತಾರವರು ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಶ್ರೀಮತಿ ಭಾರತಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ಕುಮಾರಿ ಅಕ್ಷಿತ ವಂದನಾರ್ಪಣೆ ಗೈದರು. ಸಭೆಯಲ್ಲಿ ಸಂಸ್ಥೆಯ ಸಂಸ್ಥೆಯ ದೈಹಿಕ ಶಿಕ್ಷಕರಾದ ಶ್ರೀ ಖಾಲಿದ್ ಶಿಸ್ತು ಪಾಲನೆಯ ಜವಾಬ್ದಾರಿಯನ್ನು ಮಕ್ಕಳಿಗೆ ವಿವರಿಸಿ ಕೊಟ್ಟರು.