ಭಿತ್ತಿಪತ್ರ ಪ್ರದರ್ಶನ ಸ್ಪರ್ಧೆಯಲ್ಲಿ ಹಳೆಕೋಟೆ ಶಾಲೆಗೆ ಬಹುಮಾನ
Friday, July 19, 2024
ಹಳೆಕೋಟೆ ಶಾಲೆಗೆ ಭಿತ್ತಿಪತ್ರ ಪ್ರದರ್ಶನ ಸ್ಪರ್ಧೆಯಲ್ಲಿ ಯೇನಪೋಯ ಪ್ರಶಸ್ತಿ
********************
ಯೇನಪೋಯ ಮೆಡಿಕಲ್ ಕಾಲೇಜಿನ ಬೆಳ್ಳಿ ಹಬ್ಬದ ನಿಮಿತ್ತ ಏರ್ಪಡಿಸಲಾದ ಇಂಗ್ಲೀಷ್ ಭಾಷಣ ಸ್ಪರ್ಧೆ ಮತ್ತು ಭಿತ್ತಿಪತ್ರ ಪ್ರದರ್ಶನ ಸ್ಪರ್ಧೆಯಲ್ಲಿ ಹಳೆಕೋಟೆಯ ಸಯ್ಯದ್ ಮದನಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಯೇನ ಪೋಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ| ಮೂಸಬ್ಬ, ಡಾ| ಸಹನಾ, ಎಮ್ ಎಸ್ ಡಬ್ಲ್ಯೂ ಮುಖ್ಯಸ್ಥರಾದ ಡಾ| ಮುಹಮ್ಮದ್ ಗುತ್ತಿಗಾರ್, ಕಾರ್ಯಕ್ರಮದ ಕೋ- ಆರ್ಡಿನೇಟರ್ ಆದ ರಜಾಕ್ ಕುಪ್ಪೆಪದವು ಹಾಗೂ ಯೇನಪೋಯ ಮೆಡಿಕಲ್ ಕಾಲೇಜಿನ ಉಪ ಪ್ರಾಂಶುಪಾಲರು ಮತ್ತು ಸಯ್ಯಿದ್ ಮದನಿ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕರಾದ ಕೆ ಎಂ ಕೆ ಮಂಜನಾಡಿ, ಸಂಘಟನಾ ಶಿಕ್ಷಕಿ ಶ್ರೀಮತಿ ಶಕೀಲ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು