ಚಿತ್ರಕಲೆಯಿಂದ ಮಾನಸಿಕ ಒತ್ತಡ ದೂರವಾಗುತ್ತದೆ - ರಾಜಲಕ್ಷ್ಮೀ ಅಭಿಮತ
Tuesday, July 9, 2024
ಚಿತ್ರಕಲೆಯಿಂದ ಮಾನಸಿಕ ಒತ್ಡಡ ದೂರವಾಗುತ್ತದೆ - ಶ್ರೀಮತಿ ರಾಜಲಕ್ಷ್ಮೀ ಆಬಿಮತ
ಅವರು ಮಂಗಳೂರು ಜಿಲ್ಲಾ ಶಿಕ್ಷಣ ಮತ್ತು ತರಬೇತು ಸಂಸ್ಥೆಯ ವತಿಯಿಂದ ದ ಕ.ಜಿಲ್ಲಾ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಚಿತ್ರಕಲೆಯ ವ್ಯಾಪ್ತಿ ಅಗಾಧ ಇಲ್ಲಿ ವಿಭಿನ್ನ ರೀತಿಯ ಚಿಂತನೆಗಳಿವೆ ಎಂದು ಅತಿಥಿ ಸ್ಥಾನದಿಂದ ಡಯೆಟ್ ನ ಉಪನ್ಯಾಸಕರಾದ ಶ್ರೀನಿವಾಸ್ ಅಡಿಗ ಅಭಿಪ್ರಾಯ ವ್ಯಕ್ತಪಡಿಸಿದರು.
ನಿವೃತ್ತ ಶಿಕ್ಷರುಗಳಾದ ಶೇಖರ್ ಕೋಟ್ಯಾನ್ ಮತ್ತು ಶ್ರೀಪತಿ ರಾವ್ ರವರನ್ನು ಸನ್ಮಾನಿಸಲಾಯಿತು.
ನಮ್ಮಿಂದ ಅಗಲಿದ ಚಿತ್ರಕಲಾ ಶಿಕ್ಷಕರಾದ ಜಯಂತ್ ಶೆಟ್ಟಿ ಯವರಿಗೆ ನುಡಿನಮನ ಸಲ್ಲಿಸಲಾಯಿತು.
ಜಿಲ್ಲಾ ಚಿತ್ತಕಲಾ ಸಂಘದ ಅಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ ಖಂಡಿಗ ಅಧ್ಯಕ್ಚ ಸ್ಥಾನವನ್ನು ವಹಿಸಿದ ಈ
ವೇದಿಕೆಯಲ್ಲಿ ಮಂಗಳೂರು ಜಿಲ್ಲಾ ಶಿಕ್ಚಣ ಮತ್ತು ತರಬೇತು ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ಫಾತಿಮಾ ಹಾಗೂ ಶ್ರೀಯುತ ಶಶಿಧರ್, ದ.ಕ.ಜಿಲ್ಲಾ ಚಿತ್ರಕಲಾ ಸಂಘದ ಉಪಾಧ್ಯ ಕ್ಷರಾದ ಮಂಜುನಾಥ್ ನಾಯ್ಕ್ , ಉಪಸ್ಥಿತರಿದ್ದರು
ಜಿಲ್ಲಾ ಸಂಘದ ಕಾರ್ಯದರ್ಶಿ ಬಿ ಎಂ ರಫೀಕ್ ತುಂಬೆ ಪ್ರಸ್ತಾವಿಕವಾಗಿ ಮಾತಾಡಿದರು.
ಚಿತ್ರಕಲಾ ಸಂಘದ ಉತ್ರರ ವಲಯದ ಅಧ್ಯಕ್ಷ ರಾದ ರಾಜೇಶ್ವರಿ ಯವರು ಸ್ವಾಗತಿಸಿದರು. ಅಲೋಶಿಯಸ್ ಪ್ರೌಡ ಶಾಲೆಯ ಜಾನ್ ಚಂದ್ರನ್ ರವರು ಧನ್ಯವಾದ ವಿತ್ತರು.
ಚಿತ್ರಕಲಾ ಶಿಕ್ಷಕರಾದ ಅಶೋಕ್ ಲಮಾಣಿ ಯವರು ಕಾರ್ಯಕ್ರಮ ನಿರೂಪಿಸಿದರು