ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಆಯುಕ್ತರಾಗಿ ಬಿ ಮೊಹಮ್ಮದ್ ತುಂಬೆ ಆಯ್ಕೆ
Tuesday, June 18, 2024
*ಜಿಲ್ಲಾ ಸ್ಕೌಟ್ ಆಯುಕ್ತರಾಗಿ ಶ್ರೀ ಬಿ. ಮಹಮ್ಮದ್ ತುಂಬೆಯವರು ಆಯ್ಕೆ.*
*ಕಳೆದ 40 ವರ್ಷಕ್ಕಿಂತ ಹೆಚ್ಚು ಕಾಲ ಸ್ಕೌಟಿಂಗ್ ಗೈಡಿಂಗ್ ನಲ್ಲಿ ಸ್ಕೌಟ್ ಮಾಸ್ಟರ್ ಆಗಿ,ಜಿಲ್ಲಾ ಸಂಸ್ಥೆಯಲ್ಲಿ ಜಿಲ್ಲಾ ಸಂಘಟನಾ ಆಯುಕ್ತರಾಗಿ,ಜಿಲ್ಲಾ ತರಬೇತಿ ಆಯುಕ್ತರಾಗಿ ಹಾಗೂ ಬಂಟ್ವಾಳ ಸ್ಥಳೀಯ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ,ಸ್ಕೌಟ್ ವಿಭಾಗದಲ್ಲಿ LT ತರಬೇತಿ,ಕಬ್ ವಿಭಾಗದಲ್ಲಿ HWB ತರಬೇತಿಯನ್ನು ಪಡೆದು ಸ್ಥಳೀಯ,ಜಿಲ್ಲಾ,ರಾಜ್ಯ,ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಮಾಡಿಕೊಂಡು ಬಂದಿರುವ ನಮ್ಮೆಲ್ಲರ ಪ್ರೀತಿಯ ಶ್ರೀ ಬಿ.ಮಹಮ್ಮದ್ ತುಂಬೆಯವರು ಪ್ರಸ್ತುತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ನೂತನ ಜಿಲ್ಲಾ ಸ್ಕೌಟ್ ಆಯುಕ್ತರಾಗಿ ಆಯ್ಕೆಯಾಗಿರುವುದು ಸಂತೋಷದ ವಿಚಾರ.
ತಮ್ಮ ಅವಧಿಯಲ್ಲಿ ಸ್ಕೌಟಿಂಗ್ ಮತ್ತು ಗೈಡಿಂಗ್ ನಲ್ಲಿ ಇನ್ನೂ ಉತ್ತಮ ಕಾರ್ಯಕ್ರಮ,ಚಟುವಟಿಕೆ ಹಾಗೂ ತರಬೇತಿಗಳು ಮೂಡಿಬರಲಿ ಆಶಿಸುತ್ತೇವೆ...ತಮಗೆ ಹೃದಯ ತುಂಬಿದ ಅಭಿನಂದನೆಗಳನ್ಸನು ಮಕ್ಕಳ ಜೋಳಿಗೆ ಯು ಸಲ್ಲಿಸುತ್ತದೆ.