ಭಾಗ್ಯಶ್ರೀ ಕಂಬಳಕಟ್ಟ ರವರು ಬರೆದ ಯುಗಾದಿ ಕವನ
Tuesday, April 9, 2024
ಕವನ
ಶೀರ್ಷಿಕೆ: ಯುಗಾದಿ ಹಬ್ಬ
ಹೊಸ ಹರುಷ ತಂದಿದೆ ಯುಗಾದಿ ಹಬ್ಬ
ಬೇವು ಬೆಲ್ಲದ ಸವಿಯಾ ಮೆಲ್ಲೋ ಹಬ್ಬ
ಬಾಗಿಲಿಗೇ ಕಟ್ಟೋಣ ತಳಿರು ತೋರಣ
ಅಕ್ಷಯವಾಗಲಿ ಸಂತಸದ ವಾತಾವರಣ
ಕಳೆದಿಹ ಕಹಿ ನೆನಪುಗಳ ಮರೆಯೋಣ
ಸಮಚಿತ್ತದಿ ಜೀವನವ ಮುನ್ನಡೆಸೋಣ
ಮನೆ ಮುಂದೆ ರಂಗೋಲಿಯ ಬಿಡಿಸುತ
ಹೊಸ ವರುಷಕೇ ಸ್ವಾಗತವಾ ಕೋರುತ
ನವ ಉಡುಗೆಯ ಸಂಭ್ರಮದಿ ಧರಿಸುತ
ಖುಷಿಯ ಹಂಚೋಣ ನಾವು ಅನವರತ
ಹಿರಿಯರಿಗೆ ತಲೆಯ ಬಾಗಿ ನಮಿಸೋಣ
ಬಗೆ ಬಗೆಯ ಭಕ್ಷ್ಯಗಳನು ಸವಿಯೋಣ
ಜೀವನವು ಸುಖ ದುಃಖಗಳ ಸಮ್ಮಿಶ್ರಣ
ಅರಿತು ಸಾಗಿಸೋಣ ಈ ಬಾಳ ಪಯಣ
✍️ ಭಾಗ್ಯಶ್ರೀ ಕಂಬಳಕಟ್ಟ,
ಶಿಕ್ಷಕಿ,
ಉಡುಪಿ.