-->
ಮಹಿಳಾ ದಿನಾಚರಣೆಯ ಕುರಿತು ಜಯಲಕ್ಷ್ಮಿ ಜಿ ಕುಂಪಲರವರು ಬರೆದ ಲೇಖನ‌

ಮಹಿಳಾ ದಿನಾಚರಣೆಯ ಕುರಿತು ಜಯಲಕ್ಷ್ಮಿ ಜಿ ಕುಂಪಲರವರು ಬರೆದ ಲೇಖನ‌

ಹೆಣ್ಣು-ದಿವ್ಯವಾದ ಶಕ್ತಿ, ಕುಟುಂಬದ ಕಣ್ಣು

ಆಕಾಶದ ನೀಲಿಯಲ್ಲಿ.ಚಂದ್ರ ತಾರೆ ತೊಟ್ಟಿಲಲ್ಲಿ. ಬೆಳಕನಿಟ್ಟು ತೂಗಿದಾಕೆ,ನಿನಗೆ ಬೇರೆ ಹೆಸರು ಬೇಕೆ.ಸ್ತ್ರೀ ಎಂದರೆ ಅಷ್ಟೇ ಸಾಕೆ...ಕನ್ನಡದ ಖ್ಯಾತ ಕವಿ ಜಿಎಸ್ ಶಿವರುದ್ರಪ್ಪನವರ ಕವನದ ಸಾಲುಗಳನ್ನು ಅರ್ಥೈಸಿಕೊಂಡರೆ ಜೀವನದಲ್ಲಿ ಸ್ತ್ರೀಯ ಪಾತ್ರ ಎಷ್ಟು ಆಳವಾದದ್ದು ಎಂಬುದನ್ನು ತಿಳಿಯಬಹುದು. ಮಗಳಾಗಿ ಮಡದಿಯಾಗಿ, ಮಾತೆಯಾಗಿ, ಕಾಯಾ-ವಾಚಾ-ಮನಸಾ ಕಾರ್ಯವನ್ನು ಮಾಡುವವಳು ಸ್ತ್ರೀ...

ಮನೆಯಲ್ಲಿ ಮನೆಯೊಡತೆಯಾಗಿ, ಕಚೇರಿಯಲ್ಲಿ ಅಧಿಕಾರಿಯಾಗಿ, ವಿಜ್ಞಾನಿಯಾಗಿ, ಶಿಕ್ಷಕಿಯಾಗಿ, ಗಡಿ ಕಾಯುವ ಯೋಧರಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾಳೆ ಸ್ತ್ರೀ.. ಸ್ತ್ರೀ ಎಂದರೆ ಒಂದು ಶಕ್ತಿ, ಕರುಣೆಯ ಸಾಗರ ,ಮಮತೆಯ ಆಗರ. ಮೃದು ಮಧುರ ಮನಸ್ಸಿನ ದೇವತೆ..ಮಹಿಳೆಯರ ಮೇಲಿನ ಗೌರವಕ್ಕಾಗಿ ಪ್ರತಿವರ್ಷ ವಿಶ್ವದಾದ್ಯಂತ ಮಾರ್ಚ್ 8ರಂದು "ವಿಶ್ವ ಮಹಿಳಾ ದಿನಾಚರಣೆ “ಯನ್ನು ಎಲ್ಲೆಡೆಯಲ್ಲೂ ಆಚರಿಸಲಾಗುತ್ತಿದೆ.

19ನೇ ಶತಮಾನದಲ್ಲಿ ಅಮೆರಿಕ ಮತ್ತು ಯುರೋಪ್ ದೇಶದಲ್ಲಿ ಪ್ರಾರಂಭವಾದ ಮಹಿಳಾ ಕಾರ್ಮಿಕರ ಮುಷ್ಕರದ ಫಲವಾಗಿ ಮಹಿಳೆಯರ ಶಕ್ತಿ ಸಾಮರ್ಥ್ಯ ವಿಶ್ವಕ್ಕೆ ಪರಿಚಯವಾಗಿ ಮಹಿಳಾ ದಿನಾಚರಣೆ ಅಸ್ತಿತ್ವಕ್ಕೆ ಬಂದಿತು.

ಮಹಿಳೆಯರು ಮತದಾನದ ಹಕ್ಕು, ಸಮಾನ ಕೆಲಸಕ್ಕೆ ಸಮಾನ ವೇತನ ಮೊದಲಾದ ವಿಚಾರಗಳಿಗೆ ಹೋರಾಟ ಮಾಡಿ ತಮ್ಮ ಅವಕಾಶಗಳನ್ನು ಪಡೆದುಕೊಂಡಿರುವ ಫಲವಾಗಿ ಮಹಿಳೆಯರು ಕೂಡ ಪುರುಷರಂತೆ ಸಮಾನರು ಎಂಬ ಭಾವನೆ ಎಲ್ಲರಲ್ಲೂ ಮೂಡಿಬರುತ್ತಿದೆ. ಹೆಣ್ಣಿನ ವಿಷಯವಾಗಿ ಎಷ್ಟೇ ಕಠಿಣವಾದ ಕಾನೂನುಗಳನ್ನು ಜಾರಿಗೆ ತಂದರೂ ಕೂಡ ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ಶೋಷಣೆ ಈ ಶತಮಾನದಲ್ಲಿಯೂ ಕಡಿಮೆಯಾಗಿಲ್ಲ.

ಭ್ರೂಣ ಹತ್ಯೆ ವರದಕ್ಷಿಣೆ ಹಿಂಸೆ, ಅತ್ಯಾಚಾರ, ಶೋಷಣೆ, ಶಿಕ್ಷಣದಲ್ಲಿ ಅಸಮಾನತೆ, ಲಿಂಗ ತಾರತಮ್ಯತೆ ಮೊದಲಾದವುಗಳಿಗೆ ಅದೆಷ್ಟು ಅಮೂಲ್ಯ ಜೀವಗಳು ಬಲಿಯಾಗುತ್ತಿದೆ.. ಹೆಣ್ಣಿನ ಮೇಲೆ ನಡೆಯುವ ದಬ್ಬಾಳಿಕೆ ಶೋಷಣೆ ಕಡಿಮೆಯಾಗಿ ಸುಸ್ಥಿರ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ .ಹೆಣ್ಣು ಗಂಡು ಎಂಬ ಬೇಧವಿಲ್ಲದೆ ನಾವೆಲ್ಲರೂ ಸಮಾನರು ಸ್ತ್ರೀಯರನ್ನೂ ಕೂಡ ಪೂಜ್ಯಭಾವನೆಯಿಂದ ನೋಡಬೇಕೆಂಬ ಮನಸ್ಥಿತಿ ಸಮಾಜದಲ್ಲಿ ಮೂಡಬೇಕು.

"ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ.."ಹೆಣ್ಣು ಎಂಬುದು ದಿವ್ಯವಾದ ಶಕ್ತಿ. ಹೆಣ್ಣು ಇಲ್ಲದೆ ಜಗತ್ತಿಲ್ಲ .ಹೆಣ್ಣು ಕುಟುಂಬದ ಕಣ್ಣು.ಹೆಣ್ಣಿನ ಉನ್ನತಿಗಾಗಿ ಶಿಕ್ಷಣವನ್ನು ನೀಡಿ,ಮಹಿಳಾ ಸಬಲೀಕರಣ ಮಾಡುವುದರೊಂದಿಗೆ, ಸಮಾಜದಲ್ಲಿ ಹೆಣ್ಣಿಗೆ ಸಮಾನ ಗೌರವ ನೀಡುವ ಮೂಲಕ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬುದು ನಮ್ಮ ಆಶಯ...



ಜಯಲಕ್ಷ್ಮೀ ಜಿ ಕುಂಪಲ ಮಂಗಳೂರು

Ads on article

Advertise in articles 1

advertising articles 2

Advertise under the article