ಮಕ್ಕಳ ಜೋಳಿಗೆಯಲ್ಲಿ ವಿಘ್ನೇಶ್ ನ ಚಿತ್ರಗಳು
Tuesday, November 7, 2023
ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ. ಸಾಧಿಸುವ ಛಲ ಇದ್ದರೆ ಯಶಸ್ಸು ನಿಶ್ಚಿತ.
ಕಲೆ ಎಂಬುದು ಯಾರ ಸ್ವತ್ತು ಅಲ್ಲ .. ಕಲೆಗೆ ಯಾವುದೇ ಬಂಧನವಿಲ್ಲ.ದೈಹಿಕವಾಗಿ ಸಬಲರಾಗಿದ್ದರೂ ದುರ್ಬಲರಂತೆ ವರ್ತಿಸುವವರ ಮದ್ಯೆ ಚಿತ್ರಕಲೆಯಲ್ಲಿ ಅಸಾಧಾರಣ ವಾದ ಪ್ರತಿಭೆಯನ್ನು ಹೊಂದಿದ ವಿಶೇಷ ಚೇತನ ಮಗು
ಮಂಗಳೂರು ನಿವಾಸಿ ಬಾಬು ಮತ್ತು ಲಕ್ಷ್ಮೀ ದಂಪತಿಯ ಸುಪುತ್ರ ವಿಘ್ನೇಶ್ ಎಲ್ಲರಂತಲ್ಲ
ಈ ಬಾಲಕ ಮಾತು ಬಾರದ, ಕಿವಿ ಕೇಳಿಸದ ವಿಷೇಶಚೇತನ ಮಗು
ಮಂಗಳೂರಿನ ಮಂಗಳಜ್ಯೋತಿ ಶಾಲೆ ವಾಮಂಜೂರು ಇಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಾ ಚಿತ್ರಕಲೆ ಕರಕುಶಲ ಕಲೆಯನ್ನು ಕರಗತಮಾಡಿಕೊಂಡಿದ್ದಾನೆ.
*ಈ ವಿಷೇಶ ಚೇತನ ಮಗುವಿನ ಕಲೆಯ ನ್ನು ಪ್ರೋತ್ಸಾಹಿಸುವ ಸಲುವಾಗಿ ಮಕ್ಕಳ ಜೋಳಿಗೆ ಯಲ್ಲಿ ಈ ಚಿತ್ರಗಳನ್ನು ಪ್ರಕಟಮಾಡಿದ್ದೇನೆ*
ವಿಘ್ನೇಶ್ ರಚಿಸಿದ ಕ್ರಾಫ್ಟ್
ನೀವು ಇವರ ಕಲೆಯನ್ನು ಪ್ರೋತ್ಸಾಹಿಸಿ
ವಿಘ್ನೇಶ್
10ನೇ ತರಗತಿ
ಮಂಗಳ ಜ್ಯೋತಿ ಶಾಲೆ
ವಾಮಂಜೂರು, ಮಂಗಳೂರು