
ತ್ರಿಶಾ ಪಿ ಬರೆದ ಕವನ --- ಮಳೆ
Sunday, August 6, 2023
ಮಳೆ
ಮಳೆಯ ಮೊದಲ ಹನಿ ನೆಲಕೆ ಬಿದ್ದ ತಕ್ಷಣ
ಮಣ್ಣಿನ ಘಮ ತಣಿಸುವುದು ಜನರ ಮನ
ಕುಣಿಯುವುದು ನವಿಲು ಗರಿಬಿಡಿಸಿಕೊಂಡು
ಪ್ರಕೃತಿ ನಲಿವುದು ಸಂತಸದಲಿ ಮಿಂದು
ಕೊಂಚ ಮಳೆ ಬಂದರೆ ಸಾಕು
ಮಕ್ಕಳು ಮಳೆಯಲಿ ನೆನೆಯಲೇಬೇಕು
ಕಾಗದದ ದೋಣಿಯ ತಯಾರಿಸಬೇಕು
ನೀರಲಿ ತೇಲುತಲದು ಬಹುದೂರ ಸಾಗಲೇಬೇಕು
ಮಳೆ ಬಂದರೆ ತುಂಬುವುದು ನೀರಿನ ಮೂಲಗಳು
ಆ ದಿನಗಳು ರೈತರ ಖುಷಿಯ ಕ್ಷಣಗಳು
ಮಳೆಯ ಸ್ಪರ್ಶದಲ್ಲಿ ಬೆಳೆವವು ಮರ ಗಿಡಗಳು
ಮರ ಗಿಡಗಳಿಂದ ದೊರೆಯುತ್ತದೆ ರಸಭರಿತ ಹಣ್ಣುಗಳು
ಮಳೆ ಬಂದರೆ ಸಿಗುವುದು ನೀರು
ಇದರಿಂದ ಬದುಕುವುದು
ಜೀವರಾಶಿಗಳು
ನೀರನ್ನು ರಕ್ಷಿಸುವ ಕರ್ತವ್ಯ ನಮ್ಮದು
ನೀರನ್ನು ಉಳಿಸಿದರೆ ಭೂಮಿ ಹಚ್ಚ ಹಸಿರು
✍️ ತ್ರಿಶಾ ಪಿ
8 ನೇ ತರಗತಿ
ಆಂಗ್ಲ ಮಾಧ್ಯಮ
ಸರಕಾರಿ ಪ್ರೌಢಶಾಲೆ ವಿಟ್ಲ
ಬಂಟ್ವಾಳ, ದಕ್ಷಿಣ ಕನ್ನಡ