
ದೀಪ್ತಿ ಕೆ ಸಿ ಯವರು ಬರೆದ ಕವನ " ಅಪ್ಪ"
Wednesday, August 16, 2023
*·٠•●ಅಪ್ಪ●•٠·*
ಬಾಳು ಕಲಿಸಿದ ಸಲಹೆಗಾರ
ನನ್ನ ಜೀವನದ ಆಧಾರ
ಸಣ್ಣ ತಪ್ಪನ್ನೂ ತಿದ್ದಿ ತೀಡಿರುವೆ
ಇಂದಿಗೂ ನನ್ನನ್ನು ಮಗಳೇ ಎಂದು ಕರೆಯುವೆ.....!
ನಲಿವಲ್ಲೂ ನನ್ನೊಂದಿಗಿರುವೆ
ದುಃಖದಲ್ಲಿ ಕಣ್ಣೀರ ಒರೆಸಿರುವೆ
ನಿನ್ನ ಮಾತುಗಳನ್ನೇ ನಾನು ವೇದವಾಕ್ಯವೆಂದು ತಿಳಿದಿರುವೆ
ಏಕೆಂದರೆ ನಾನು ನಿನ್ನನ್ನು ದೇವರಂತೆ ಕಾಣುವೆ
ನೀನು ಪಟ್ಟಿರುವ ಕಷ್ಟವನ್ನೆಲ್ಲಾ ನೋಡುತ್ತಾ ಬಂದಿರುವೆ
ಇನ್ನಾದರೂ ನಿನ್ನನ್ನು ಖುಷಿಯಾಗಿಡಬೇಕು ಎಂಬ ಕನಸನ್ನು ಹೊತ್ತು ನಾ ಕಾಯುತ್ತಿರುವೆ...!
ದೀಪ್ತಿ ಕೆ.ಸಿ
10ನೇ ತರಗತಿ
ಕೆ.ಪಿ.ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ