
ರಕ್ಣಾ ಬರೆದ ಕವನ
Friday, July 21, 2023
*ನನ್ನಪ್ಪ*
ನನ್ನ ಅಪ್ಪನೆಂದರೆ ನನಗಿಷ್ಟ
ನನ್ನ ಪ್ರೀತಿಸುವ ಅಪಾರ
ನನ್ನ ನೋಡಿಕೊಳ್ಳುವ ಸರದಾರ
ನನ್ನ ಜೀವವೆ ನನ್ನಪ್ಪ
ನನ್ನ ಮನಸನು ಅರಿಯುವ
ಏನು ಕೇಳಿದರು ಕೊಡಿಸುವ
ನನ್ನ ಜೊತೆ ಸೇರಿ ಆಡುವ
ನನ್ನ ಜೀವವೆ ನನ್ನಪ್ಪ
ತಪ್ಪು ಮಾಡಿದರೆ ಕ್ಷಮಿಸುವ
ಕಷ್ಟಗಳ ತಾನು ಸಾಹಿಸುವ
ನಮ್ಮ ಮನೆಯ ಯಜಮಾನ
ನನ್ನ ಜೀವವೆ ನನ್ನಪ್ಪ
ನನ್ನ ಕನಸುಗಳ ನನಸಾಗಿಸುವ
ಜೀವನ ಪಾಠಗಳ ಕಲಿಸುವ
ದೇವರ ರೂಪವೆ ನನ್ನಪ್ಪ
ನನ್ನ ಜೀವವೆ ನನ್ನಪ್ಪ
- ರಕ್ಷಾ
8 ನೇ ತರಗತಿ
ಆಂಗ್ಲ ಮಾಧ್ಯಮ
ಸರಕಾರಿ ಪ್ರೌಢಶಾಲೆ ವಿಟ್ಲ
ಬಂಟ್ವಾಳ, ದ. ಕ