
ಬಿಂಬ-ಪ್ರತಿಬಿಂಬ - ಜಯಲಕ್ಷ್ಮಿ ಜಿ ಕುಂಪಲರವರ ಕವನ
Tuesday, July 25, 2023
8:49 AM
ಬಿಂಬ - ಪ್ರತಿಬಿಂಬ
ಕನ್ನಡಿಯಲ್ಲಿ ಕಂಡೆನು ನನ್ನ ಮುಖ ದರುಶನವನು
ಕಾಣುತಿಹೆನು ವ್ಯತ್ಯಾಸಗಳಿಂದ ಕೂಡಿದ ವದನವನು
ಕಣ್ಣಳತೆಯಲ್ಲಿ ಕಾಣೆನು ನಾನು ಬದಲಾವಣೆಯನು
ಕಣ್ಣ ನೋಟವು ಬದಲು ಮಾಡಿಹುದು ನನ್ನೀ ಮನಸನು
ಕನ್ನಡಿಯು ನಮ್ಮಯ ಮನದ ಮಾತಿಗೆ ಪ್ರತಿಬಿಂಬವು
ಕನ್ನಡಿಯು ತೋರಿಸುವುದು ಎಂದೆಂದೂ ಸತ್ಯಾಂಶವು
ಕನ್ನಡಿಯ ಬಿಂಬದಲ್ಲಿ ಕಾಣಲಾರೆವು ಲೋಪ ಲವಲೇಶವು
ಕನ್ನಡಿಯ ಮುಂದೆ ನಿಂತಿರಲು ಮೂಡುವುದು ಆನಂದವು
ಕಾಣದ ಇನಿಯನ ಬರುವಿಕೆಯ ನೆನಪಿನಲಿ ನಾನಿಲ್ಲಿ ಕಾಯುತಿರುವೆನು ಒಲುಮೆ ಬೆರೆತ ಬಟ್ಟ ಕಂಗಳಲ್ಲಿ
ಕಂಗಳ ನೋಟವು ಬೆರೆಯುತ ಬಾಳುವ ಬಯಕೆಯಲ್ಲಿ
ಕಳೆದುಹೋದೆನು ನೆನೆಯುತ ದಿನವಿಡಿ ಕಾಯುವಿಕೆಯಲ್ಲಿ
ಕನಸುಗಳು ಮೂಡುವುದು ನಿನ್ನಯ ದರುಶನ ದೊಳು
ಕನವರಿಸುತಿಹುದು ಬಾಳ ಭವಿಷ್ಯದ ಹೊಂಗನಸುಗಳು
ಕವನವಾಗಿ ಚಿಮ್ಮುತಿಹುದು ಪ್ರೇಮಲೋಕದ ಭಾವನೆಗಳು
ಕಲ್ಪನಾಲೋಕದಲಿ ತೇಲುತ ಸಾಗುತಿಹೆನು ಈ ದಿನದೊಳು
ಜಯಲಕ್ಷ್ಮೀ ಜಿ ಕುಂಪಲ