ಅಂತರಾಷ್ಟ್ರೀಯ ಯೋಗದಿನದ ಕುರಿತು ಕವನ - ಜಯಲಕ್ಷ್ಮಿ ಜಿ ಕುಂಪಲ
Tuesday, June 20, 2023
ಯೋಗವ ಮಾಡಲು ನೀನು...
ಯೋಗವ ಮಾಡಲು ಅಭಿವೃದ್ಧಿಯು ಆರೋಗ್ಯವು ರೋಗ ರುಜಿನವು ಎಂದಿಗೂ ಬಾರದು ಸನಿಹವು ದೇಹ-ಮನಸ್ಸು ಉಸಿರಿನೊಂದಿಗೆ ಸಂಯೋಗವು ಆರೋಗ್ಯದಾಯಕ ಜೀವನಕಿದುವೇ ಸಹಾಯಕವು
ಯೋಗವ ಮಾಡಲು ಹೆಚ್ಚುವುದು ಸೌಂದರ್ಯವು ಮೂಡುವುದು ನಿತ್ಯದ ಕೆಲಸದೊಳು ಉತ್ಸಾಹವು ಯೋಗವ ಮಾಡುತ ಸೇವಿಸೆ ನಿತ್ಯಸಾತ್ವಿಕ ಆಹಾರವು ಮನದಲ್ಲಿ ಮೂಡುವುದು ಧಾರ್ಮಿಕ ಸುವಿಚಾರವು
ಪತಂಜಲಿ ಮುನಿ ಕಲಿಸಿದ ಪ್ರೇರಣೆಯ ಯೋಗವು ನೆಮ್ಮದಿಯ ಬದುಕನು ನಡೆಸಲಿದುವೇ ಪೂರಕವು ನಿತ್ಯವು ಮಾಡಲು ನೀನು ಸೂರ್ಯ ನಮಸ್ಕಾರವು ಹೆಚ್ಚುವುದು ಎಲ್ಲರೊಳು ಸಚ್ಚಾರಿತ್ರ್ಯ ಸಂಸ್ಕಾರವು
ಧ್ಯಾನ ಆಸನ ಪ್ರಾಣಾಯಾಮದಿ ಸಂಯೋಜಿತವು ಕೋಪವ ಮಥಿಸುತ ದೀರ್ಘಾಯುಷ್ಯಕೆ ಭಾಷ್ಯವು ನಿತ್ಯ ಯೋಗ ಮಾಡುತಿರೆ ಜೀವನ ಪರಿಪೂರ್ಣವು ದುಃಖ ದುಮ್ಮಾನಗಳಿಂದ ತನು ಮನವು ಮುಕ್ತ ವು
@ ಜಯಲಕ್ಷ್ಮೀ ಜಿ ಕುಂಪಲ
ಸರಕಾರಿ ಪ್ರೌಢಶಾಲೆ, ಕಲ್ಲರಕೋಡಿ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ