-->
ಚೆಲುವೆಯರು - ಜಯಲಕ್ಷ್ಮಿ ಜಿ ಕುಂಪಲ ರವರ ಕವನ

ಚೆಲುವೆಯರು - ಜಯಲಕ್ಷ್ಮಿ ಜಿ ಕುಂಪಲ ರವರ ಕವನ




🌹 ಚೆಲುವೆಯರು🌹

        ಅಂದದಿ ಕುಳಿತಿಹ
       ಸುಂದರ ಬಾಲೆಯರು
 ಕೆಂಪಗೆ ರಂಗನು  ಹಚ್ಚಿಹರು
       ಚಂದದ ಮೊಗದಲಿ 
       ಚಂದಿರ ಮೂಡಲು 
ತಂದರು ಗೆಲುವನು ಮಡಿಲಿನಲಿ

        ಜಳಕವ  ಗೈಯುತ 
        ಪುಳಕದಿ ಕುಳಿತರು
 ಥಳುಕುವ ಮೈಯನು ತೋರಿಸುತಾ
           ಸುಳಿದಿದೆ ಕಣ್ಣಲಿ
         ಸೆಳೆಯುವ ಕಾಂತಿಯು
 ಕಳೆದಿದೆ ದಿನಗಳು ಹರುಷದಲಿ

         ಹೆರಳದು ಕಪ್ಪಗೆ
       ಉರುಳಿದೆ ಎದುರಲಿ
ವರವದು ಹೆಣ್ಣಿಗೆ ಬಾಳಿನಲಿ
        ಕೊರಳಲಿ ಮುತ್ತಿನ
         ಹಾರವು ಸುತ್ತಿದೆ
 ಕರಗಳು ಬಳೆಯಲಿ ಬಂಧಿಸುತಾ

        ಹರುಷದಿ ಮೊಗವನು
         ದರುಶನ ಮಾಡಲು 
ಮರೆವುದು ದುಃಖವು ಮರುಗಳಿಗೆ
          ಶಿರವನು ಬಾಗುತ
        ಕರವನು ಮುಗಿಯಲು
 ವರವನು ಕೊಡುವನು ಶ್ರೀಹರಿಯು

✍️ ಜಯಲಕ್ಷ್ಮಿ ಜಿ ಕುಂಪಲ





Ads on article

Advertise in articles 1

advertising articles 2

Advertise under the article