-->
ಮೇ ಚಿತ್ರ ಮಾಸ " ರಜೆಯಲ್ಲೊಂದು ಬಣ್ಣದ ಮಜ ಬಿತ್ತಿ ಪತ್ರ ಅನಾವರಣ

ಮೇ ಚಿತ್ರ ಮಾಸ " ರಜೆಯಲ್ಲೊಂದು ಬಣ್ಣದ ಮಜ ಬಿತ್ತಿ ಪತ್ರ ಅನಾವರಣ



ಮೇ ಚಿತ್ರ ಮಾಸ - ರಜೆಯಲ್ಲೊಂದು ಬಣ್ಣದ ಮಜ‌ ಕಾರ್ಯಕ್ರಮ ದ ಬಿತ್ತಿ ಪತ್ರ ಅನಾವರಣವನ್ನು ಮಂಗಳೂರು ದಕ್ಷಿಣ ವಲಯದ  ಕ್ಷೇತ್ರ ಶಿಕ್ಷಣಾಧಿಕಾರಿಯಾದ. ಹೆಚ್ ಆರ್ ಈಶ್ವರ‌ , ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀಮತಿ ಪೂರ್ಣಿಮಾ ಶೆಟ್ಟಿ, ಕಛೇರಿ ಅಧೀಕ್ಷಕರಾದ ರವೂಫ್ ರವರು ಮಾಡಿದರು.
ಈ ಸಮಯ ಮಕ್ಕಳ ಜೋಳಿಗೆ ಯ ಸಂಚಾಲಕರಾದ ಬಿ.ಎಂ.ರಫೀಕ್ ತುಂಬೆಯವರು ಉಪಸ್ಥಿತಿ ಇದ್ದರು.


ಮೇ ಚಿತ್ರ ಮಾಸ ರಜೆಯಲ್ಲೊಂದು ಬಣ್ಣದ ಮಜ‌ ಬಿತ್ತಿ ಪತ್ರವನ್ನು ಅನಾವರಣಗೊಳಿಸಿದವರ ಮಾತು



"ಮೇ ಚಿತ್ರ ಮಾಸ" ಮಕ್ಕಳ ಪ್ರತಿಭೆಯನ್ನು ಹೊರ ಸೆಳೆಯುವಂತಹ  ಕಾರ್ಯಕ್ರಮ ವಾಗಿರುತ್ತದೆ ಜೊತೆಗೆ ಸಮಯದ ಸದುಪಯೋಗ ಮಾಡಿಕೊಳ್ಳಲು ಈ ಕಾರ್ಯಕ್ರಮ ಪೂರಕವಾಗಿದೆ.
ವರ್ತಮಾನದ ಬದುಕಿನಲ್ಲಿ ಚಿತ್ರ ಕಲೆಗೂ ಅಗ್ರಮಾನ್ಯ ಸ್ಥಾನವಿದೆ ವಿದ್ಯಾರ್ಥಿಗಳು ಕೇವಲ ಸರಕಾರಿ ನೌಕರನ ಕೆಲಸಕ್ಕೆ ಜೋತು ಬೀಳುವುದನ್ನು ಬಿಟ್ಟು ಚಿತ್ರಕಲೆಯಲ್ಲಿ ಕೂಡಾ ಪರಿಣತೆಯನ್ನು ಸಾಧಿಸಿ ಎಲ್ಲರಂತೆ ನೆಮ್ಮದಿಯ ಜೀವನವನ್ನು ನಡೆಸಲು ಚಿತ್ರಕಲೆಯ ಲ್ಲಿ ಅವಕಾಶ ವನ್ನು ಕಲ್ಪಸಿಕೊಡಲಾಗಿದೆ.
ಜೊತೆಗೆ ಮಕ್ಕಳ ಮಾನಸಿಕ ಆರೋಗ್ಯ, ಕ್ರಿಯಾತ್ಮಕವಾದ ಬೆಳವಣಿಗೆ, ನೆಮ್ಮದಿ, ಸಂತೋಷ, ಸೃಜನಶೀಲ ತೆಯ ಬೆಳವಣಿಗೆಗೆ ಪೂರಕ ಈ ಕಾರ್ಯಕ್ರಮ
ಇಂತಹ ಕಾರ್ಯಕ್ರಮ ದಲ್ಲಿ ಮಕ್ಕಳು ತೊಡಗಿಸಿಕೊಳ್ಳುವಂತೆ  ಮಾಡುವುದು ಪೋಷಕರ ಕರ್ತವ್ಯ.

ಈ 'ಮೇ ಚಿತ್ತಮಾಸ " ಕಾರ್ಯಕ್ರಮ ವನ್ನು ನಡೆಸುತ್ತಿರುವ ಚಿತ್ತಕಲಾ ಶಿಕ್ಷಕಲಾ ಶಿಕ್ಚಕರಾದ ಬಿ.ಎಂ.ರಫೀಕ್ ತುಂಬೆಯವರ ಕಾರ್ಯ ನಿಜಕ್ಕೂ ಶ್ಲಾಘನೀಯ
ಒಳ್ಳೆಯದಾಗಲಿ,

*ಹೆಚ್ ಆರ್ ಈಶ್ವರ*
ಕ್ಷೇತ್ರ ಶಿಕ್ಷಣಾಧಿಕಾರಿಗಳು
ಮಂಗಳೂರು ದಕ್ಷಿಣ ವಲಯ

@@@@@@@@@@@@@




ಇದು ಮೊಬೈಲ್ ಯುಗ. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ತನಕ ನಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ ನಲ್ಲಿ ಕಳೆಯುತ್ತಾರೆ
'ಮೇ ಚಿತ್ರ ಮಾಸ' ಇದೊಂದು ಒಳ್ಳೆಯ ಅವಕಾಶ. ಮಕ್ಕಳೊಂದಿಗೆ ಪೋಷಕ ರೂ ಸಹಕರಿಸಿ ಮಕ್ಕಳು ಚಿತ್ರ ಬಿಡಿಸುವಂತೆ ಪ್ರೋತ್ಸಾಹಿಸಿ ತಾವೂ ಸ್ವಲ್ಪ ದಿನಗಳ ಮಟ್ಟಿಗೆ ಮಕ್ಕಳೊಂದಿಗೆ ಮಕ್ಕಳಾಗಿ , ಮಕ್ಕಳಿಗೆ ಸಲಹೆ ನೀಡುತ್ತಾ ಚಿತ್ರ ಬಿಡಿಸಿ ಆಕರ್ಷಕ ಸರ್ಟಿಫಿಕೇಟ್ ಪಡೆಯಿರಿ. ಯಾರಿಗೊತ್ತು ಮುಂದೊಮ್ಮೆ ನಿಮ್ಮ ಮಕ್ಕಳೂ ದೊಡ್ಡ ಚಿತ್ರಗಾರನಾಗಿ ಪ್ರಸಿದ್ಧವಾಗಬಹುದು.
ಈಗ ಅಜ್ಜಿ ಮನೆಗೆ ಹೋಗುವುದು, ನೆಂಟರ ಮನೆಗೆ ಹೋಗುವುದು  ಕಡಿಮೆಯಾಗಿದೆ ಹಾಗಾಗಿ ರಜೆಯನ್ನು ಮಜಾದಿಂದ ಕಳೆಯಲು "ಮೇ ಚಿತ್ರ ಮಾಸ" ದಲ್ಲಿ ಭಾಗವಹಿದಸಿ.
ಈ ಕಾರ್ಯಕ್ರಮ ದ ಆಯೋಜಕರಾಗಿರುವ ಬಿ.ಎಂ.ರಫೀಕ್ ತುಂಬೆ ಯವರಿಗೆ ಇಂತಹ ಉತ್ತಮ ಕಾರ್ಯಕ್ರಮ ಇನ್ನೂ ಮುಂದುವರಿಸಲು ದೇವರು ಶಕ್ಯಿ ನೀಡಲಿ ಎಂದು ಶುಭ ಹಾರೈಕೆ,     
      
*ಪೂರ್ಣಿಮಾ ಶೆಟ್ಟಿ*
ಪತ್ರಾಂಕಿತ ವ್ಯವಸ್ಥಾಪಕರು
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ
ಮಂಗಳೂರು ದಕ್ಷಿಣ ವಲಯ



@@@@@@@@@@@




ಇದೊಂದು ಉತ್ತಮ ಅವಕಾಶ 
ಮಕ್ಕಳು ತಮ್ಮಲ್ಲಿದ್ದ  ಪ್ರತಿಭೆಯನ್ನು ಹೊರಚೆಲ್ಲಲು ಈ ವೇದಿಕೆ ಸೂಕ್ತ 
ಮಕ್ಕಳ ಮಾನಸಿಕ  ಮತ್ತು ಕ್ರಿಯಾತ್ಮಕ ವಾದ ವಿಕಸನ ಚಿತ್ರಕಲೆಯಿಂದ ಸಾಧ್ಯ  " ಮೇ ಚಿತ್ರ ಮಾಸ " ಎಂಬ ಈ ಬಣ್ಣದ ಕಾರ್ಯಕ್ರಮ ದಲ್ಲಿ ಎಲ್ಲಾ ಮಕ್ಕಳು ಭಾಗವಹಿಸಿ ಖುಷಿಯಾಗಿರಿ..ರಜೆಯ ಮಜವನ್ನು ಆಸ್ವಾದಿಸಿ.

*ಅಬ್ದುಲ್ ರವೂಫ್*
ಅಧೀಕ್ಷಕರು
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ
ಮಂಗಳೂರು ದಕ್ಷಿಣ ವಲಯ





Ads on article

Advertise in articles 1

advertising articles 2

Advertise under the article