
ಎಳೆಯ ಬೆಳೆಯುವ ಚಿತ್ರ ಕಲಾವಿದ - ಕುಷಿತ್ ಮಲ್ಲಾರ
Friday, January 6, 2023
ಪ್ರತೀಯೊಬ್ಬರಲ್ಲಿ ಒಂದಲ್ಲಾ ಒಂದು ರೀತಿಯ ಪ್ರತಿಭೆ ಅಡಗಿರುತ್ತದೆ. ಈ ರೀತಿ ಎಳೆಯ ಪ್ರಾಯದಲ್ಲೇ ಸಾಧನೆ ಮಾಡಿದ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಕುಷಿತ್ ಮಲ್ಲಾರ್ ರ ಪರಿಚಯವನ್ನು ಮಕ್ಕಳ ಜೋಳಿಗೆ ಯಲ್ಲಿ ಪರಿಚಯಿಸಲು ಹೆಮ್ಮೆಯಾಗುತ್ತಿದೆ.
ಕಲೆಯನ್ನು ನೋಡಿ ಆಸ್ವಾದಿಸುವುದು ಸುಲಭ ಆದರೆ ಇಂತಹ ಕಲೆಯನ್ನು ಕರಗತ ಮಾಡಿಕೊಳ್ಳಲು ಸತತ ಪರಿಶ್ರಮ ಅಗತ್ಯ.
ತನ್ನ 10ನೇ ವಯಸ್ಸಿನಲ್ಲಿ ಹಲವು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಕುಷಿತ್ ಮಲ್ಲಾರ್ ಗೆ ಚಿತ್ರಕಲೆ ಕೈ ಹಿಡಿದಿದೆ.
ಹೀಗೆ ಕಲೆಯ ಮೇಲೆ ಆಸಕ್ತಿ ಹೊಂದಿದ ಕುಷಿತ್ ಮಲ್ಲಾರ, ಲಿಂಗಪ್ಪ ಮಲ್ಲಾರ ಮತ್ತು ಭವ್ಯ ಮಲ್ಲಾರ ದಂಪತಿಗಳ ಪುತ್ರ.
ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ರ ನಿರ್ದೇಶನದಲ್ಲಿ ಚಿತ್ರಕಲಾ ಅಭ್ಯಾಸ ಮಾಡುತ್ತಿದ್ದಾರೆ
ಕುಷಿತ್ ಮಲ್ಲಾರ ರವರು ಪಡಕೊಂಡ ಪ್ರಶಸ್ತಿಗಳು
ಕ್ರಿಯೇಟಿವ್ ಸ್ಕೂಲ್ ಆಫ್ ಆಟ್೯ ಸುಳ್ಯ ಇವರು ನಡೆಸಿರುವ ವರ್ಣಚಿತ್ತಾರ ದಲ್ಲಿ ಭಾಗವಹಿಸಿ 2018, 2019, 2020, 2021, 2020 ರಲ್ಲಿ ಉತ್ತಮ ಕಲಾಕೃತಿ ಪ್ರಶಸ್ತಿಯನ್ನು ಪಡೆದಿದ್ದಾರೆ
ಶ್ರೀ ಶಾರದಾಂಬೆ ಭಜನೆ ಮಂಡಳಿ, ಪಂಜ ಇವರಿಂದ 2019 ರಲ್ಲಿ ಉತ್ತಮ ಕಲಾಕೃತಿ ಪ್ರಶಸ್ತಿಯನ್ನು ಪಡೆದುಕೊಂಡರು
ಫ್ರೆಂಡ್ಸ್ ಕ್ಯಾಟರಿಂಗ್ ರವರು ನಡೆಸಿದ ಕೊರೋನಾ ಜಾಗೃತಿ ಚಿತ್ರ ಬಿಡಿಸಿ 2020ರಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ
ಸುದ್ದಿ ಸಮೂಹ ಸಂಸ್ಥೆ ನಡೆಸಿದ ಚಿತ್ರ ಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
ಪ್ರತಿಬಾ ಕಾರಂಜಿ ಯಲ್ಲಿ ಪ್ರಥಮ
ಕೆ ವಿ ಜಿ ಸುಳ್ಯ ಹಬ್ಬದ ಆಚರಣೆಯಲ್ಲಿ ನಡೆದಂತಹ ಚಿತ್ರ ಸ್ಪರ್ದೆ ಯಲ್ಲಿ ಪ್ರಥಮ
ಜೆಸಿಐ ಪಂಜ ಇವರು ಚಿತ್ರಕಲಾ ಶಿಕ್ಷಕ ಮಹಾಬಲ ಕುಳ ರವರ ಸ್ಮರಣಾರ್ಥ ನಡೆಸಿದ ಚಿತ್ರ ಕಲಾ ಸ್ಪರ್ಧೆಯಲ್ಲಿ ಪ್ರಥಮ
ಉದಯವಾಣಿ ಚಿಣ್ಣರ ಬಣ್ಣ ಕಾರ್ಯ ಕ್ರಮದಲ್ಲಿ 2019 ಮತ್ತು 2022 ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ
ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ಇವರು ನಡೆಸಿದ ಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದಿದ್ದಾರೆ
ಪಂಜ ಪರಿಸರದ ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ನಡೆಸಿದ ಚಿತ್ರ ಸ್ಪರ್ಧೆಯಲ್ಲಿ ಅತ್ಯುತ್ತಮ ಚಿತ್ರ ಕಲಾ ಪ್ರಶಸ್ತಿ.
ಜೆಸಿಐ ಪಂಜ ಪಂಚಶ್ರೀ ರಜತ ಚಿತ್ತಾರ ದಲ್ಲಿ ಚಿತ್ರ ಕಲೆಯಲ್ಲಿ ಪ್ರಥಮ
ಮಕ್ಕಳ ಜಗಲಿಯಲ್ಲಿ ಕಲಾ ಪ್ರಶಸ್ತಿ
ನ್ಯಾಷನಲ್ ಲೆವೆಲ್ ಆಟ್೯ಫೆಸ್ಟ್ 2020 Online_
ಪ್ರಥಮ
ಇನ್ನೂ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಕುಷಿತ್ ಮಲ್ಲಾರ ರಿಗೆ ಅಭಿನಂದನೆಗಳು
ಕುಷಿತ್ ಮಲ್ಲಾರ ರವರು ಭವಿಷ್ಯದ ಲ್ಲಿ ಉತ್ತಮ ಚಿತ್ರಕಾರರಾಗಿ ಬೆಳೆಯಲಿ ಎಂದು ಮಕ್ಕಳ ಜೋಳಿಗೆ ಹಾರೈಸುತ್ತದೆ
ಕುಷಿತ್ ಮಲ್ಲಾರ ರವರಿಗೆ ಅಭಿನಂದನೆಗಳು