
ಎನ್. ಸ್ಪಂದನಾ ರವರ ಕವನ "ಅನುಬಂಧ"
Wednesday, December 28, 2022
*ಅನುಬಂಧ*
ಓ ಒಲವ ಗೆಳತಿಯೇ,
ಹೆಚ್ಚೇನೂ ಹೇಳಲಾರೆ,
ಬಿಡುವಿನ ವೇಳೆಯಲ್ಲಿ ನನ್ನ ಪಿಸುಮಾತ ದನಿಯನು ಕೇಳೇ!
ನಾ ಹೆಚ್ಚೇನೂ ಹೇಳಲಾರೆ|
ಬಂಧವಿರಲಿ ಉಸಿರಿನ ಕೊನೆಯಾ ತನಕ,
ನೀನಿರದಿರೆ ಕಾಡುವುದು ನನ್ನೊಳಗೆ ತವಕ!
ನಾ ಹೆಚ್ಚೇನೂ ಹೇಳಲಾರೆ|
ಸೋಲು- ಗೆಲುವಿಲ್ಲೂ ನೀ ಜೊತೆಗಿರುವೆ ಎಂದಿನಂತೆ,
ನೀ ಮುನಿಸಿಕೊಂಡಾಗೆಲ್ಲ ಅನಿಸುವುದು ಈ ಜೀವ ಕಳೆದಂತೆ!
ನಾ ಹೆಚ್ಚೇನೂ ಹೇಳಲಾರೆ|
ನಿನ್ನ ಹೆಸರು _ನಾಝಿಯಾ_,
ವರ್ಣಿಸಲು ಪದಗಳೇ ಇಲ್ಲ, ನಿನ್ನೊಲುಮೆಯ ಪರಿಯಾ,
ನನಗೆಂದೂ ನೀ ಇಷ್ಕ ಹೈ ಪಿಯಾ!
ನಾ ಹೆಚ್ಚೇನೂ ಹೇಳಲಾರೆ||
-- ಎನ್ ಸ್ಪಂದನಾ
ಮಾರಿಕಾಂಬಾ ಪದವಿ ಪೂರ್ವ ಕಾಲೇಜು
ಶಿರಸಿ, ಉತ್ತರಕನ್ನಡ