ಸ್ಪಂದನಾ ರವರು ರಚಿಸಿದ ಕವನ - ದರ್ಪಣ
Saturday, October 22, 2022
____*"ದರ್ಪಣ"*____
★★★★★
ಮನಸಿನ ಬೇಸರವ ಮರೆಸುತ,
ಚೆಲುವೆಯರ ಅಂಗೈ ಪುಸ್ತಕವಾಗುತ,
ಖುಷಿಯ ಕಂಪನು ಸೂಸುತ,
ನೀನಿರುವೆ ಎಲ್ಲರ ಬಳಿಯಲಿ.
ನಾ ಕಂಡು ನಕ್ಕಾಗ ನೀ ನಗುವೆ,
ಶುಭ ಕಾರ್ಯದ ಪ್ರತೀಕವಾಗಿರುವೆ,
ಭಾವನೆಗೆ ಸ್ವಚ್ಛವಾಗಿ ಸ್ಪುಟವಾಗಿರುವೆ,
ನೀನಿರುವೆ ಎಲ್ಲರ ಬಳಿಯಲಿ.
ಜಾತಿ ಧರ್ಮಗಳ ಬೇಧವಿಲ್ಲದೆ,
ಸತ್ಯತೆಗೆ ತೊಡಕಿಲ್ಲದೇ,
ಯಾರಿಗೂ ಭಾರಿಯಾಗಿರದೆ
ನೀನಿರುವೆ ಎಲ್ಲರ ಬಳಿಯಲಿ.
ಜಗಕೆ ಬಾಹ್ಯ ಸೌಂದರ್ಯವ ತೋರಿ,
ಅಂತರಂಗದ ಪರಿಚಯದ ಹಾದಿಯಲ್ಲಿ ಏಕೆ ಮೌನಿಯಾಗಿರುವೆ?
ಕಾಡುತಿದೆ ಈ ಪ್ರಶ್ನೆ!
ಉತ್ತರಿಸುವೆಯಾ ಓ ಕನ್ನಡಿಯೇ....
@@@@@@@@@@
---ಎನ್.ಸ್ಪಂದನಾ
ಪ್ರಥಮ ಪಿ ಯು ಸಿ ಕಲಾ ವಿಭಾಗ
ಶ್ರೀ ಮಾರಿಕಾಂಬಾ ಪದವಿ ಪೂರ್ವ ಕಾಲೇಜು ಸಿರಸಿ, ಉತ್ತರ ಕನ್ನಡ