ಸ್ಪಂದನಾ ರವರು ಬರೆದ ಕವನ
Friday, September 9, 2022
*ಲೋಕದ ಮುಖ*
ಕುರುಡು ಲೋಕವಿದು,
ಢೋಂಗೀ ಬದುಕಿನ ಬೀಡಿದು.
ಮೋಹದಾ ಜಾಲವಿದು,ಆಸೆಯು ಮಿತಿಗೆ ನಿಲುಕದ್ದು
ಬಡಲೋಕವಯ್ಯ ನಮ್ಮದು.
ದೇವ ಬಾರದ ಮರುಭೂಮಿಯಿದು, ಸಜ್ಜನರಿಗೆ ನರಕವಿದು,
ದುರ್ಜನರ ತವರೂರಿದು
ಬಡಲೋಕವಯ್ಯ ನಮ್ಮದು.
ನಂಬಿಕೆಯ ಕುರುಹಿಲ್ಲದ ಕಾನನವಿದು, ನಯವಂಚಕರ ಪಾಲಿನ ಶ್ರೀಮಂತ ಊರಿದು
ಬಡಲೋಕವಯ್ಯ ನಮ್ಮದು.
ಬಂಗಾರದ ಭೂಮಿಯಿದು, ತ್ಯಾಜ್ಯದ ತೊಟ್ಟಿಲಿದು
ಅಪರಾಧಗಳ ಸಂಕೋಲೆಯಿದು, ಮತ್ತೆಂದೂ ಬಾರದೆನಿಸುವ ಪಾಪಿಗಳ ಸೂರಿದು,
ಬಡಲೋಕವಯ್ಯ ನಮ್ಮದು...
@@@@@@@@@@
ಎನ್. ಸ್ಪಂದನಾ.
ಪ್ರಥಮ ಪಿ ಯು ಸಿ ಕಲಾ ವಿಭಾಗ
ಸರಕಾರಿ ಪದವಿ ಪೂರ್ವ ಕಾಲೇಜು
ಶಿರಸಿ, ಉತ್ತರಕನ್ನಡ