-->
ಜೂನ್ 14 ವಿಶ್ವ ರಕ್ತದಾನಿಗಳ ದಿನ - ಈ ಕುರಿತು ಜಯಲಕ್ಷ್ಮೀ ಕುಂಪಲರವರ ಲೇಖನ

ಜೂನ್ 14 ವಿಶ್ವ ರಕ್ತದಾನಿಗಳ ದಿನ - ಈ ಕುರಿತು ಜಯಲಕ್ಷ್ಮೀ ಕುಂಪಲರವರ ಲೇಖನ





ಜೂನ್ 14 ವಿಶ್ವ ರಕ್ತದಾನಿಗಳ ದಿನ...

 ರಕ್ತದಾನ ಮಹಾದಾನ...
ಅಪಘಾತ ಸಂಭವಿಸಿದವರಿಗೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ಹೆರಿಗೆಯಂತಹ ಪ್ರಮುಖ ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ.ಈ ಸಂದರ್ಭದಲ್ಲಿ ರಕ್ತದಾನ ಮಾಡುವುದರಿಂದ ಸಾವಿನ ಜೊತೆ ಹೊರಡುತ್ತಿರುವ ವ್ಯಕ್ತಿಯನ್ನು ಬದುಕಿಸಿ ಪ್ರಾಣಾಪಾಯದಿಂದ ಪಾರು ಮಾಡಬಹುದು.

ರಕ್ತದಾನ ಮಾಡುವುದರಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಸ್ವಇಚ್ಛೆಯಿಂದ ರಕ್ತದಾನ ಮಾಡುವುದಕ್ಕೆ ಪ್ರೇರೇಪಿಸುವ ಸಲುವಾಗಿ ಪ್ರತಿವರ್ಷ ಜೂನ್ 14ರಂದು "ವಿಶ್ವ ರಕ್ತದಾನಿಗಳ ದಿನ" ವನ್ನು ಆಚರಿಸಲಾಗುತ್ತದೆ.
ಇದು ವಿಶ್ವದ ಪ್ರತಿಯೊಬ್ಬ ರಕ್ತದಾನಿ ಗೆ ನೀಡುವ ಸನ್ಮಾನವಾಗಿದೆ..

 ರಕ್ತವನ್ನು ನಾವು ಯಾವುದೇ ಫ್ಯಾಕ್ಟರಿಗಳಲ್ಲಿ ಅಥವಾ ಯಂತ್ರಗಳ ಮೂಲಕ ತಯಾರು ಮಾಡಲು ಸಾಧ್ಯವಿಲ್ಲ ಅಥವಾ ಯಾವುದೇ ಅಂಗಡಿಯಿಂದ ಹಣಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ. ಕೇವಲ ರಕ್ತದಾನಿಯಿಂದ ಮಾತ್ರ ಪಡೆದುಕೊಳ್ಳಲು ಸಾಧ್ಯ.. ರಕ್ತವು ಜಾತಿ ,ಮತ ,ಧರ್ಮಗಳ ಎಲ್ಲೆ ಮೀರಿ ಮಾನವ ಮಾನವರ ನಡುವೆ ಬೆಸುಗೆಯನ್ನು ಮಾಡುವ ಶಕ್ತಿಯನ್ನು ಹೊಂದಿದೆ. ಕೆಲವು ರಕ್ತದ ಗುಂಪುಗಳು ಅತಿ ವಿರಳವಾಗಿದ್ದು ರಕ್ತ ಸಿಗುವುದೇ ಕಷ್ಟಕರವಾಗಿರುತ್ತದೆ.  ಇಂತಹ ಸಂದರ್ಭದಲ್ಲಿ ರಕ್ತ ದಾನಿಯಿಂದ ಪಡೆದ ರಕ್ತದಿಂದ ಮಾತ್ರ ರೋಗಿಯ ಜೀವ ಉಳಿಸಬಹುದು.

 ಭಾರತದಲ್ಲಿ ರೆಡ್ ಕ್ರಾಸ್ ಸಂಸ್ಥೆಯು ರಕ್ತನಿಧಿಯ ಮುಖಾಂತರ ಹಲವಾರು ಜೀವಗಳನ್ನು ಉಳಿಸುವಲ್ಲಿ ಅತ್ಯಂತ ಶ್ಲಾಘನೀಯ ಪಾತ್ರವನ್ನು ವಹಿಸುತ್ತದೆ.
ತನ್ನ ರಕ್ತವನ್ನು ಕೊಟ್ಟು ಬೇರೆಯವರ ಪ್ರಾಣವನ್ನು ಉಳಿಸುವ ರಕ್ತದಾನಿಗಳ ಸೇವಾ ಕಾರ್ಯಕ್ಕೆ ನಮ್ಮದೊಂದು ಸಲಾಂ...

ಜಯಲಕ್ಷ್ಮಿ ಜಿ ಕುಂಪಲ
ಮಂಗಳೂರು
Pic: Google/internet
🌺🌺🌺🌺🌺🌺🌺🌺🌺🌺🌺🌺🌺🌺🌺

Ads on article

Advertise in articles 1

advertising articles 2

Advertise under the article