ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಜಯಲಕ್ಷ್ಮೀ ಕುಂಪಲರವರ ಕವನ
Wednesday, April 13, 2022
ಸಂವಿಧಾನ ಶಿಲ್ಪಿ ಅಂಬೇಡ್ಕರ್....
ವರುಷಗಳ ಹಿಂದೆ
ಭಾರತ ಮಾತೆಯ ಮಡಿಲಲಿ
ಜನಿಸಿದ ವರಪುತ್ರರಿವರು
ಸಮಾನತೆಯ ಸಂದೇಶ
ಜಗದೆಲ್ಲೆಡೆ ಸಾರಿದ
ವೀರಪುತ್ರರಿವರು...
ಅಸ್ಪೃಶ್ಯತೆ ,ಜಾತಿಪದ್ಧತಿ
ವಿರುದ್ಧ ಕೆಚ್ಚೆದೆಯಿಂದ
ಹೋರಾಡಿದ ಛಲಗಾರರಿವರು...
ಅವಮಾನ ,ಅಪಮಾನ
ಅನಾದರ ,ಅನಾಚಾರಗಳ
ಮೆಟ್ಟಿನಿಂತವರಿವರು....
ಸರ್ವರಿಗೂ ಸಮಬಾಳು
ಶಿಕ್ಷಣ , ಜ್ಞಾನಾರ್ಜನೆಯ
ಮಹತ್ವ ಸಾರಿ ಹೇಳಿದರಿವರು...
ಜನತೆಯ ಏಳಿಗೆಗಾಗಿ
ಎಂದೂ ಮರೆಯದ
ಸಂವಿಧಾನ ರಚಿಸಿದವರಿವರು...
ಮಾನವತಾವಾದಿ , ಸಂವಿಧಾನ ಶಿಲ್ಪಿ ಮಹಾನಾಯಕನಾಗಿ ಜನತೆಯ
ಹೃದಯದಿ ಮೆರೆದವರಿವರು....
✍️ ಜಯಲಕ್ಷ್ಮೀ ಜಿ ಕುಂಪಲ