ಯುಗಾದಿ....... ಜಯಲಕ್ಷ್ಮೀ ಕುಂಪಲರವರ ಕವನ
Saturday, April 2, 2022
ಯುಗಾದಿ...
ಪ್ಲವ ವಿಪ್ಲವ ಸರಿದು ಶುಭಕೃತು ಬರುತಿರಲು..
ಮನದೊಳಗಿನ ಕಲ್ಮಶಗಳು ನೀರಿನಂತೆ ಸರಿಯುತಿರಲು
ಯುಗದ ಆದಿಯಲ್ಲಿ ನಿಂತಿರುವೆವಿಂದು ನಾವು...
ಹಳೆಯ ಕಹಿ ನೆನಪುಗಳ ಮರೆತಿಹೆವಿಂದು ನಾವು....
ಚೈತ್ರಮಾಸದ ಆಗಮನವಾಗಿಹುದು ಭುವಿಗೆ...
ಸಂತಸವು ತುಂಬಿ ತುಳುಕಿಹುದು ಮನದೊಳಗೆ...
ಬೇವು ಬೆಲ್ಲವ ಹಂಚಿ ಕಹಿನೆನಪು ಮರೆಯುತ
ಸವಿ ಮಾತನಾಡಿ ಸಿಹಿ ನೆನಪುಗಳು ಸುರಿಸುತ
ಯುಗಗಳು ಸರಿದರೂ ಯುಗಾದಿ ಬರುತಿರಲಿ
ಹೊಸ ಚೈತನ್ಯ ಹೊಸ ಹುರುಪು ಮನೆ ಮಾಡಲಿ...
ಜಯಲಕ್ಷ್ಮಿ ಜಿ ಕುಂಪಲ
ಮಂಗಳೂರು
🌹🌹🌹🌹🌹🌹🌹🌹🌹🌹🌹🌹🌹