ಎಪ್ರಿಲ್-22. ವಿಶ್ವ ಭೂಮಿಯ ದಿನ ಈ ಕುರಿತಾಗಿ ಜಯಲಕ್ಷ್ಮೀ ಕುಂಪಲ ರವರ ಕವನ -
Thursday, April 21, 2022
ಎಪ್ರಿಲ್ 22 "ಭೂ ದಿನ"
🌹ಭೂಮಿತಾಯಿ🌹
ಜಗದ ಜನರ ಸಲಹುವ
ತಾಯಿಯೀಕೆ
ಪ್ರೀತಿಯಿಂದ ಲಾಲಿ ಪಾಲಿಸಿ
ಪೊರೆವಳೀಕೆ....
ಸಕಲ ಜೀವರಾಶಿಗಳಿಗೆ
ಆಶ್ರಯದಾತೆಯೀಕೆ
ತಪ್ಪುಗಳ ಮನ್ನಿಸುವ
ಕ್ಷಮಯಾಧರಿತ್ರಿಯೀಕೆ......
ಹಸುರಿನಿಂದ ಕಂಗೊಳಿಸುತ
ಮುದ ನೀಡುವಳೀಕೆ
ಶುದ್ಧಗಾಳಿ ಬೆಳಕು ನೀರ 💧
ನೀಡುವಳೀಕೆ.....
ಮನುಜನ ಅತ್ಯಾಸೆಗೆ
ಬಲಿಯಾದವಳೀಕೆ
ಎಲ್ಲರ ಸಲಹುವ
ಕರುಣಾಮಯಿಯೀಕೆ...
- ಜಯಲಕ್ಷ್ಮಿ ಜಿ ಕುಂಪಲ
🥀🌷🌊🌳🌴
🌏 🌎 🌍