ಪರೀಕ್ಷೆಯ ಭಯ - ಸುಮಂಗಳಾ ದಿನೇಶ್ ಶೆಟ್ಟಿ ಯವರ ಕವನ
Sunday, March 27, 2022
*ಶೀರ್ಷಿಕೆ : ಪರೀಕ್ಷೆಯ ಭಯ*
ಯಾಕೋ ಏನೋ ಮನಸು ಮಂಕಾಗಿದೆ
ಸಾಕೋ ಸಾಕಪ್ಪ ಈ ಓದು ಎಂಬಂತಿದೆ…..//
ಕೇಕೆ ಹಾಕೋ ದ್ವನಿ ಮೌನತೆಗೆ ಜಾರಿದೆ
ಬೇಕೆ ಈ ಪರೀಕ್ಷೆ ಮನ ಗೊಣಗುತ್ತಿದೆ
ಕೈಕಾಲುಗಳು ಬೆವರಿ ತಣ್ಣಗಾದಂತಿದೆ
ಕಣ್ಣು ಮಂಜಾಗಿ ಪ್ರಶ್ನೆ ಕಾಣದಂತಾಗಿದೆ……//
*//ಯಾಕೋ ಏನೋ………….//*
ಭಯದ ಛಾಯೆ ಎದೆಯಲ್ಲಿ ಮೂಡಿದೆ
ಮುಗ್ಧ ನಗುವ ಮೊಗದಿಂದ ಕಸಿದಿದೆ
ತುಂಟತನವ ಬಾಳಿಂದ ದೂರ ಸರಿಸಿದೆ
ಜವಾಬ್ದಾರಿಯ ಕೂಪಕ್ಕೆ ತಳ್ಳಿದಂತಾಗಿದೆ…….//
*//ಯಾಕೋ ಏನೋ…………//*
ನೀರಲ್ಲಿ ನಿಂತಂತಾಗಿದೆ ಒಬ್ಬಂಟಿಯಾಗಿ
ಕೂರಲಸಾಧ್ಯವು ಕೈಕಟ್ಟಿ ಹೇಡಿಯಾಗಿ
ತೊರೆದು ಹೆದರಿಕೆಯನು ಆತ್ಮಬಲದಿ
ಸೇರಲೇಬೇಕು ಈಜಿ ದಡವ ಸ್ವಪ್ರಯತ್ನದಿ………//
*//ಯಾಕೋ ಏನೋ…………//*
✒️ *ಸುಮಂಗಲಾ ದಿನೇಶ್ ಶೆಟ್ಟಿ.ಕುಂಪಲ*