ಮಹಿಳಾ ದಿನದ ವಿಶೇಷ ಲೇಖನ - ಪ್ರತಿಮಾ ಹೆಬ್ಬಾರ್
Monday, March 7, 2022
ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ:
ಎಲ್ಲಿ ಸ್ತ್ರೀ ಪೂಜಿಸಲ್ಪಡುವಳು ಅಲ್ಲಿ ದೇವತೆಗಳು ನೆಲೆಸುವರು.
ಪ್ರತಿವರ್ಷ ಪ್ರಪಂಚದಾದ್ಯಂತ ಮಾರ್ಚ್ ಎಂಟನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಯಾಗಿ ಆಚರಿಸಲಾಗುತ್ತಿದೆ.
ಇದರ ಹಿಂದಿನ ಇತಿಹಾಸ ರೋಚಕವಾಗಿದೆ ಸುಮಾರು 1909 ರಲ್ಲಿ ಅಮೇರಿಕಾದ ರಾಜಕೀಯ ಪಕ್ಷವು ನ್ಯೂಯಾರ್ಕ್ ನಗರದಲ್ಲಿ ಕಡಿಮೆ ವೇತನ ಶ್ರೇಣಿ ಸಮಾನ ಅವಕಾಶಗಳು ಮತ್ತು ಮತದಾನದ ಹಕ್ಕು ಗಳ ಕೊರತೆಯಂತಹ ಸಮಸ್ಯೆಗಳ ವಿರುದ್ಧ ಪ್ರತಿಭಟಿಸಿ ಮಹಿಳಾ ದಿನವನ್ನು ಆಚರಿಸಿತು ತದನಂತರ ಇದರ ಅಗತ್ಯತೆ ಕಂಡು ಇದನ್ನು ಪ್ರಪಂಚದಾದ್ಯಂತ ಆಚರಣೆ ಮಾಡಲಾಯಿತು1975 ನಲ್ಲಿ ವಿಶ್ವಸಂಸ್ಥೆ ಮಹಿಳಾ ದಿನವನ್ನು ಗುರುತಿಸಿತು ಹಾಗೂ ಮಾರ್ಚ್ 8 ಮಹಿಳಾ ದಿನಾಚರಣೆ ಎಂದು ಘೋಷಿಸಿತು.
ಸ್ತ್ರೀಯನ್ನು ತಾಯಿ, ಸಹನಾಮಯಿ, ಕರುಣಾಮಯಿ, ಕ್ಷಮಯಾಧರಿತ್ರಿ ಹೀಗೆ ಪರಿಪರಿಯಾಗಿ ವರ್ಣಿಸ ಲಾಗುತ್ತದೆ..
ಮಹಿಳೆ ಸಂಘಟಕಳಾಗಿ, ಆಡಳಿತದ ನಾಯಕಿಯಾಗಿ, ಬಹುರಾಷ್ಟ್ರೀಯ ಕಂಪೆನಿಗಳ ನಿರ್ದೇಶಕಿಯಾಗಿ, ಪಾಲುದಾರಳಾಗಿ, ಆರೋಗ್ಯ ಅಧಿಕಾರಿಯಾಗಿ, ಶಿಕ್ಷಕಿಯಾಗಿ, ಕಲಾವಿದೆಯಾಗಿ ಜೀವನದಲ್ಲಿ ಇನ್ನೂ ಅನೇಕ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಬಲ್ಲ ಳು.
ಮಹಿಳೆ ಸಮಾಜದ ಶಕ್ತಿ. ಕುಟುಂಬದ ಕೇಂದ್ರಬಿಂದು. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಆಕೆ ಮಹತ್ವದ ಪಾತ್ರ ನಿರ್ವಹಿಸಿದ್ದು ಮಹಿಳೆ ಎಲ್ಲವನ್ನು ನಿಭಾಯಿಸಬಲ್ಲೆ ಎಂಬುವುದನ್ನು ತೋರಿಸಿಕೊಟ್ಟಿದ್ದಾಳೆ .ಗಡಿ ಕಾಯುವುದರಿಂದ ಹಿಡಿದು ಕುಟುಂಬದ ಪ್ರತಿಯೊಂದು ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಬಲ್ಲ ಉತ್ಸಾಹ ಧೈರ್ಯವೂ ಇದೆ.
2022 ರ ಮಹಿಳಾ ದಿನಾಚರಣೆಯ ಥೀಮ್ ಹೀಗಿದೆ "ಸುಸ್ಥಿರ ನಾಳೆಗಾಗಿ ಇಂದು ಲಿಂಗಸಮಾನತೆ."
ಮಹಿಳೆಯರ ಸಬಲೀಕರಣ ರಾಷ್ಟ್ರ ನಿರ್ಮಾಣಕ್ಕೆ ಕಾರಣವಾಗಿದೆ. ಇಂದು ದೇಶದ ಪ್ರಗತಿಗೆ ಆಕೆಯ ಕೊಡುಗೆ ಬಹಳಷ್ಟಿದೆ. ರಾಷ್ಟ್ರದ ಮಹಿಳೆಯ ಸುರಕ್ಷತೆ ಮತ್ತು ಸಬಲೀಕರಣ ನಡೆಸಲು ನಮ್ಮ ಮನಸ್ಥಿತಿ ಬದಲಿಸಿ ಲಿಂಗಸಮಾನತೆಯ ಕಡೆಗೆ ಹೆಚ್ಚು ಗಮನವನ್ನು ನೀಡಬೇಕಾಗಿದೆ.
21ನೇ ಶತಮಾನದಲ್ಲಿ ಯೂ ಮಹಿಳೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ ಬಾಲ್ಯ ವಿವಾಹ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಇದರಿಂದ ಇನ್ನೂ ಆಕೆ ಬಿಡುಗಡೆಯಾಗಿಲ್ಲ ಇದಕ್ಕೆ ಸಮಾಜದ ಮನಸ್ಥಿತಿ ಬದಲಾಗಬೇಕಾಗಿದೆ ಇದಕ್ಕಾಗಿ ಲಿಂಗ ಸಮತೋಲನ ಅತಿ ಅಗತ್ಯವಾಗಿದೆ.
ಎಷ್ಟೇ ಹೆಣ್ಣು ಎಷ್ಟೇ ಗಟ್ಟಿಗಿತ್ತಿ ಆದರೂ ನೋವಿಗೆ ಕಷ್ಟಕ್ಕೆ ಸ್ಪಂದಿಸುತ್ತಾಳೆ. ಹೆಣ್ಣೆಂದರೆ ಹಾಗೆಯೇ. ಅವಳು ಈ
ಸೃಷ್ಟಿಯ ಕೊಡುಗೆ ಹೆಣ್ಣು ಯಾರ ಗುಲಾಮಳಲ್ಲ. ಅವಳನ್ನು ಸಮನಾಗಿ ಗೌರವಿಸುವ ಮೂಲಕ ದಿನಾಚರಣೆಗೆ ಅರ್ಥ ನೀಡಬೇಕು.
ಪ್ರತಿಮಾ ಹೆಬ್ಬಾರ್