-->
ವಿಶ್ವ ವನ್ಯ ಜೀವಿ ದಿನದ ವಿಶೇಷ ಲೇಖನ- ಪ್ರತಿಮಾ ಹೆಬ್ಬಾರ್

ವಿಶ್ವ ವನ್ಯ ಜೀವಿ ದಿನದ ವಿಶೇಷ ಲೇಖನ- ಪ್ರತಿಮಾ ಹೆಬ್ಬಾರ್


ವಿಶ್ವ ವನ್ಯ ಜೀವಿ ದಿನ
ಮಾರ್ಚ್ 3 ಪ್ರತಿವರ್ಷ ವನ್ಯಜೀವಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ದಿನ ಪ್ರಾಣಿಗಳು ಸಸ್ಯ ಸಂಕುಲ ಗಳ ಕುರಿತಾಗಿ ಜಾಗೃತಿ ಮೂಡಿಸಲಾಗುತ್ತದೆ. ವನ್ಯಜೀವಿಗಳು ಹಾಗೂ ವೈವಿಧ್ಯತೆ ಪ್ರಾಮುಖ್ಯತೆಯನ್ನು ತಿಳಿಸುವಲ್ಲಿ ಈ ದಿನವನ್ನು  ಮೀಸಲಾಗಿಡಲಾಗಿದೆ. ಭೂಮಿ ಯಲ್ಲಿ ಜೀವಸಂಕುಲದ ವಿಶೇಷತೆ ಯನ್ನು ಅರ್ಥಮಾಡಿಕೊಳ್ಳುವುದು ಈ ದಿನದ ವಿಶೇಷತೆ.
ಬದಲಾಗುತ್ತಿರುವ ಪ್ರಕೃತಿಯ ಕುರಿತು ಜಾಗೃತಿ ಮತ್ತು ಮಾಹಿತಿಯನ್ನು ಈ ದಿನ ನೀಡಲಾಗುತ್ತದೆ. ಮಾನವ ನಿಂದ ಸಸ್ಯ ಪ್ರಾಣಿಗಳು ಸಮಸ್ಯೆ ಎದುರಿಸುತ್ತಿರುವ ವಿಚಾರಗಳನ್ನು ಕೂಡ ಈದಿನ ಚರ್ಚಿಸಲಾಗುತ್ತದೆ.


ಕಾಡುಗಳಲ್ಲಿನ ವಿವಿಧ ಜೀವ ವರ್ಗ ಮತ್ತು ಪರಿಸರ ವ್ಯವಸ್ಥೆಗಳನ್ನು ತಿಳಿಯುವ ಕಾರ್ಯ ಈ ದಿನ ನಡೆಸಲಾಗುತ್ತದೆ.
ಡಿಸೆಂಬರ್ 20 20೦3ರಂದು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಮಾರ್ಚ್  3 ವಿಶ್ವ ವನ್ಯಜೀವಿ ದಿನವನ್ನಾಗಿ ಆಚರಿಸುವ ಬಗ್ಗೆ ತೀರ್ಮಾನಿಸಲಾಯಿತು.
ಕಳೆದ 16 ವರ್ಷಗಳಿಂದ ಪ್ರಪಂಚದಾದ್ಯಂತ ವನ್ಯಜೀವಿಗಳನ್ನು ಮತ್ತು ಸಸ್ಯಸಂಕುಲವನ್ನು ಉಳಿಸುವ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ.
ಜಿಮ್ ಫಾವ್ಲ ರ್ ಹೇಳಿರುವಂತೆ ಮಾನವನ ಜೀವನಕ್ಕೆ ವನ್ಯಜೀವಿಗಳು ಮತ್ತು ಅರಣ್ಯ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಇದಕ್ಕಾಗಿ ಕಾಡು ಪ್ರಾಣಿಗಳು ಮತ್ತು ಅರಣ್ಯಗಳ ರಕ್ಷಣೆ ಅತ್ಯಗತ್ಯ.

ಆದರೆ ಮಾನವನ ಸ್ವಾರ್ಥ ವ್ಯಾಮೋಹದಿಂದಾಗಿ ಅನೇಕ ಪ್ರಾಣಿಸಂಕುಲ ಗಳು ವಿನಾಶದತ್ತ ಸಾಗುತ್ತಿದೆ ಹೀಗೆ ಮುಂದುವರಿದರೆ ಪ್ರಾಣಿ-ಪಕ್ಷಿಗಳನ್ನು ಚಿತ್ರಗಳಲ್ಲಿ ನೋಡಬೇಕಾದೀತು.
ಇದಕ್ಕಾಗಿಯೇ ವನ್ಯಜೀವಿ ಸಂಪತ್ತನ್ನು ನಾವು ಮುಂದಿನ ಪೀಳಿಗೆಗೆ ಹಸ್ತಾಂತರಿಸ ಬೇಕಿದೆ. ಇದಕ್ಕಾಗಿ ಕಾಡುಗಳನ್ನು ಉಳಿಸುವುದು ಅನಿವಾರ್ಯ. ಇದನ್ನೆಲ್ಲಾ ಮನಗಂಡು ವಿಶ್ವಸಂಸ್ಥೆ ಮಾರ್ಚ್ ಮೂರರಂದು ವನ್ಯಜೀವಿ ದಿನಾಚರಣೆಯನ್ನು ಆಚರಿಸುತ್ತಿದೆ.



ಪ್ರತಿಮ ಹೆಬ್ಬಾರ್ 
ಸಹಶಿಕ್ಷ ಕಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಗಂಬಿಲ.
ದಕ್ಷಿಣ ಕನ್ನಡ


Ads on article

Advertise in articles 1

advertising articles 2

Advertise under the article