-->
ಜಯಲಕ್ಷ್ಮಿ ಜಿ ಕುಂಪಲ ರವರ ಕವನ - ಕಳೆದು ಹೋದ ನೆನಪುಗಳು

ಜಯಲಕ್ಷ್ಮಿ ಜಿ ಕುಂಪಲ ರವರ ಕವನ - ಕಳೆದು ಹೋದ ನೆನಪುಗಳು




🌺 ಕಳೆದು ಹೋದ ನೆನಪುಗಳು🌺

ಚಂದಮಾಮನ ತೋರಿಸುತ ಅಮ್ಮ ತುತ್ತಿಟ್ಟ ದಿನಗಳು
ಅಪ್ಪನ ಹೆಗಲ ಮೇಲೆ ಕುಳಿತ ತಲೆ ಸವರಿದ  ಸ್ಪರ್ಶಗಳು
 ಜಗಳವಾಡಿ ಸೋತು ನಿತ್ಯ ಸಂತೈಸುವ ಅಣ್ಣನ ಕರಗಳು
 ಮೂಲೆಯಲಿ ಹೆದರಿ ಥರಥರ ನಡುಗಿಹ  ದೇಹಗಳು

 ಶಾಲೆಯ ಬಳಿಯ ಗುಡ್ಡದಲಿ ಆಟವಾಡಿದ ನೆನಪುಗಳು
 ನೃತ್ಯ ನಾಟಕವಾಡಿ ಬಹುಮಾನ ಗಳಿಸಿದ ನೆನಪುಗಳು
 ಗೆಳೆಯನ ಆಟೋಗ್ರಾಫ್ ಗಾಗಿ ತವಕಿಸಿದ ನೆನಪುಗಳು 
ಕಾಲೇಜು ಕೊನೆಯಲಿ ಗೆಳತಿಯ ತಬ್ಬಿ ಅತ್ತ ನೆನಪುಗಳು

 ಮನದ ಮೂಲೆಯಲಿ ಹೆಣೆದಿಹ  ಮಧುರ ಸ್ವಪ್ನಗಳು
 ಮೆಲುಕು ಹಾಕುತಿರುವ ಸುಂದರ ಈ ಘಳಿಗೆಗಳು
 ಮನಕೆ ಸಂತಸ ನೀಡುವ ಹಳೆಯ ರಸನಿಮಿಷಗಳು
 ಸಿಹಿ ಕಹಿ ನೆನಪುಗಳನು ಬಿಗಿದು ಕಟ್ಟಿದ ತೋರಣಗಳು

 ಮತ್ತೆ ಮರಳಿ ಬಾರದ ಹಳೆಯ ಅನೂಹ್ಯ ಕ್ಷಣಗಳು 
ನೆನಪುಗಳ ನೆನಪಿನೊಂದಿಗೆ ಸಾಗುವುದು ಈ ಮನಗಳು 
  ನುಗ್ಗಲಿ ಬಾಳಬಂಡಿ ಸಿಹಿ-ಕಹಿಗಳ ಜೊತೆ ಜೊತೆಯೊಳು 
 ಬೆಳಗೋಣ ಮನ ನೆನಪುಗಳ ಹೊಸ  ಕಿರಣದೊಳು

             ✍️ಜಯಲಕ್ಷ್ಮಿ ಜಿ ಕುಂಪಲ


Ads on article

Advertise in articles 1

advertising articles 2

Advertise under the article