
ತ್ರಿಲೋಕ ರಕ್ಷಕ - ಭಾಗ್ಯಶ್ರೀ ಕಂಬಳಕಟ್ಟ ರವರ ಕವನ
Tuesday, March 1, 2022
*ತ್ರಿಲೋಕ ರಕ್ಷಕ*
ಜಗದೀಶ್ವರ ಜಗಕಾಯ್ವ ಮೃತ್ಯುಂಜಯನೆ
ಗಂಗಾಧರ ಸುರಸುಂದರ ವಾಮದೇವನೆ |
ನಾಗಭೂಷಣ ವಿಷ ಉಂಡ ವಿಷಕಂಠನೆ
ಬಾಗುತಲಿ ದೇವನಿಗೆ ಸಲ್ಲಿಸುವೆ ವಂದನೆ ||
ದೇವತೆಗಳ ದೇವ ಮಹಾದೇವ ಶಂಕರ
ಅವನಿಯ ಕಾಪಾಡು ಅರ್ಧನಾರೀಶ್ವರ |
ನವಚೈತನ್ಯವ ನೀಡು ಹೇ ಪರಮೇಶ್ವರ
ಭವಭಯಹರನೊಲಿದರೆ ದುರಿತದೂರ ||
ಕೈಲಾಸವಾಸಗೆ ಕರಮುಗಿದು ನಮಿಸುವೆ
ಹಾಲಾಹಲ ಕುಡಿದ ಹರನ ಪ್ರಾರ್ಥಿಸುವೆ |
ತ್ರಿಲೋಕ ರಕ್ಷಕನೇ ಹರಸೆಂದು ಬೇಡುವೆ
ನೀಲಕಂಠ ಸ್ತುತಿಯ ಅನುದಿನ ಪಾಡುವೆ ||
✍️ *ಭಾಗ್ಯಶ್ರೀ ಕಂಬಳಕಟ್ಟ, ಉಡುಪಿ.*