-->
ಮಳೆ ನೀರಲಿ ತೇಲಿದೆ ನೆನಪಿನ ದೋಣಿ - ಸುಮಂಗಲಾ ಕುಂಪಲ ರವರ ಕವನ

ಮಳೆ ನೀರಲಿ ತೇಲಿದೆ ನೆನಪಿನ ದೋಣಿ - ಸುಮಂಗಲಾ ಕುಂಪಲ ರವರ ಕವನ




ಶೀರ್ಷಿಕೆ : ಮಳೆ ನೀರಲಿ ತೇಲಿದೆ ನೆನಪಿನ ದೋಣಿ

ಬಾಲ್ಯಕಾಲದಿ ಆಡಿದ ಮುಗ್ಧ ಮನಸಿನ ಆಟಗಳು
ಮರೆಯಾಗದ ಮಸ್ತಕದ ಸುಂದರ ನೋಟಗಳು
ಖುಷಿಯಲಿ ಮನದಿಂದ ಜಿಗಿದು ಹೊರಬಂದ ವಾಣಿ
ಮರುಕಳಿಸಿ ಮಳೆ ನೀರಲಿ ತೇಲಿದ ನೆನಪಿನ ದೋಣಿ

ಮಳೆ ಬಂದರೆ ಸಾಕು ಮನ ಕುಣಿದು ಕುಪ್ಪಳಿಸಿ ಓಡಿ
ಸಡಗರದಿ ಜೊತೆಸೇರಿ ಕಾಗದದ ದೋಣಿಯ ಮಾಡಿ
ನೀರನರಸಿ ಬಿಡಲು ಸಂತಸದಿ ಕಾಗದದ ದೋಣಿಯ
ಅರಳುವುದು ಮುಖ ನೋಡಲು ಅದರ ಚಲನೆಯ

ಪುಟ್ಟ ಹೃದಯದಲಿ ಬೆಟ್ಟದಷ್ಟು ಆನಂದದ ಹೊನಲು  
ಮನದಲಿ ದುಃಖದ ಅನುಭವವು ಕವಚಿ ಬೀಳಲು
ಮತ್ತೆ ಖುಷಿ ಸಾಲಾಗಿ ಬಿಟ್ಟ ದೋಣಿ ಪಯಣಿಸಲು
ನೆನಪು ಬಲು ಅಮೂಲ್ಯ ,ಅಸಾಧ್ಯ ಮರಳಿ ಸಿಗಲು

✍️ಸುಮಂಗಲಾ ದಿನೇಶ್ ಶೆಟ್ಟಿ ಕುಂಪಲ



Ads on article

Advertise in articles 1

advertising articles 2

Advertise under the article