ಕಲಿಕೆ - ಸುಮಂಗಲಾ ದಿನೇಶ್ ಶೆಟ್ಟಿ ಕುಂಪಲ ರವರ ಕವನ
Friday, February 11, 2022
ಮಾತ್ರಾಗಣ ಆಧಾರಿತ ಶಿಶುಪ್ರಾಸ ಕವನ ರಚನೆ
ಕಲಿಕೆ
*****##
ಮಕ್ಕಳೆ ನೀವು
ಶಾಲೆಗೆ ಹೊರಡಿ
ಹಾಕುತ ಹೆಜ್ಜೆಯ ನಗುಮೊಗದಿ
ಪಾಠದ ಜೊತೆಗೆ
ಚೇಷ್ಟೆಯ ಮಾಡಿ
ಪ್ರೀತಿಯ ಪಡೆವಿರಿ ಶಿಕ್ಷಣದಿ
ಗೆಳೆಯರ ಸೇರಿ
ಕೆಲಸವ ಮಾಡಿ
ಗೆಲ್ಲುತ ಮನವನು ಶಿಕ್ಷಕರ
ಛಲವನು ಬಿಡದೆ
ಕನಸನು ನನಸು
ಮಾಡಲು ಸಿದ್ದರು ಪಾಲಕರ
ಶಾಲೆಯೆ ನಿಮ್ಮ
ಜೀವವೊ ತಮ್ಮ
ಬದುಕನು ಕಲ್ಪಿಸುವ ಗುರುಕಲವು
ಕಲೆಗಳ ಕಲಿಸಿ
ಶಿಸ್ತನು ಬೆರೆಸಿ
ಮಣ್ಣಿಗೆ ರೂಪವ ತುಂಬುವುವು
ನಲಿಯುತ ಕಲಿತು
ಬುದ್ಧಿಯ ಗಳಿಸಿ
ದೇಶಕೆ ಹಿತವನ್ನು ಮಾಡುತಲಿ
ಗೆಲುವಿಗೆ ದಾರಿ
ತೋರಿದ ಗುರುವ
ಮರೆಯದೆ ಸಾಗಿರಿ ಬಾಳಿನಲಿ
ಸುಮಂಗಲಾ ದಿನೇಶ್ ಶೆಟ್ಟಿ, ,ಕುಂಪಲ