ಗಂಧದ ವನದಲಿ ಚಂದದ ಸುಮಗಳು ಸುಮಂಗಲಾ ದಿನೇಶ್ ಶೆಟ್ಟಿ ಕುಂಪಲ ರವರ ಕವನ
Friday, February 4, 2022
ಶೀರ್ಷಿಕೆ : ಗಂಧದ ವನದಲಿ ಚಂದದ ಸುಮಗಳು
ಗಂಧದ ವನದಲಿ ಚಂದದ ಸುಮಗಳು
ನಗುವನು ಚೆಲ್ಲುತ ಅರಳಿದೆ ಮನಗಳು
ಇಷ್ಟ ಬಂದಂತೆ ನಲಿಯುವ ಜೀವಗಳು
ಕಿನ್ನರ ಲೋಕದ ಮುದ್ದು ಪುಟಾಣಿಗಳು
ಆಡುತ ಕಲಿಯುತ ಚೇಷ್ಟೆಯ ಮಾಡುತ
ಸಾಗುತ ಹೊರಟಿಹ ಭವಿಷ್ಯದ ಪಥದತ್ತ
ತಂದೆತಾಯಿಗಳ ಕನಸು ನನಸಾಗಿಸಲು
ಪಡುತಿಹರು ಶ್ರಮ ಯಶಸ್ವಿಗೊಳಿಸಲು
ಕೋಪಗೊಳ್ಳುತ ಕ್ಷಣದಿ ಜೊತೆಯಾಗುತ
ಕೈ ಕೈ ಹಿಡಿದು ಭೇದಭಾವವ ಮರೆಯುತ
ಓಡುತ ಹಾರುತ ಚಂಗನೆ ಜಿಗಿಯುತ
ಮೋಹದಿ ಸೆಳೆಯುತ ಮೋಡಿ ಮಾಡುತ
ನಂದಗೋಕುಲವು ಇವರಿರುವ ಮನೆಯು
ತುಂಬಿರುವುದು ಸಂತೋಷ ನೆಮ್ಮದಿಯು
ಮಾತಲ್ಲೆ ಜಗವನು ಗೆಲ್ಲುವ ಪೋರರಿವರು
ಲೋಕವನ್ನು ಬೆಳಗಿಸಬಲ್ಲ ಪ್ರತಿಭಾನ್ವಿತರು
✍️ಸುಮಂಗಲಾ ದಿನೇಶ್ ಶೆಟ್ಟಿ ಕುಂಪಲ