ಪ್ರಕೃತಿಯ ಐಸಿರಿ - ಜಯಲಕ್ಷ್ಮಿ ಜಿ ಕುಂಪಲ ರವರ ಕವನ
Monday, February 7, 2022
ಪ್ರಕೃತಿಯ ಐಸಿರಿ🌹
ಮುಗಿಲ ತೋರಣದಿ ಆಗಸವು ಸುಂದರ
ಹಸಿರ ಹಾಸಿನ ಚೆಲುವದು ಪ್ರಕೃತಿಗೆ ಭೂಶಿರ
ಗಗನದಿ ಮೂಡಿಹುದು ಚುಕ್ಕಿಗಳ ಚಿತ್ತಾರ
ಬೆಳದಿಂಗಳ ಚೆಲ್ಲುತಿಹ ಮುಗುಳ್ನಗೆ ಚಂದಿರ
ಮುಗಿಲೆತ್ತರದಿ ಮುತ್ತಿಕ್ಕುತಿದೆ ಗಿರಿ-ಶಿಖರ
ಕಾನನದ ನಡುವಲಿ ಧುಮ್ಮಿಕ್ಕುತಿದೆ ಜಲಸಾಗರ
ಕಣ್ಮನ ಸೆಳೆದಿದೆ ಇಳೆಯ ಸಿರಿ ಸೊಬಗು
ಹೃನ್ಮನ ತುಂಬಿದೆ ಪ್ರಕೃತಿಯಮಾತೆಯ ಸೆರಗು
ಸೃಷ್ಟಿಯ ಸೊಬಗಿದು ಕಣ್ಣಿಗೆ ವಿನೂತನ
ಕಾಯಬೇಕು ಇಳೆಯನು ನಿತ್ಯ ಜತನ
ಸೃಷ್ಟಿಯ ವಿಚಿತ್ರಕೆ ಪುಳಕಗೊಂಡಿದೆ ಮೈಮನ
ಪ್ರಕೃತಿ ಮಾತೆಯ ಚೆಲುವಿಗ್ಯಾರು ಸಮಾನ.....
Jayalakshmi G ಕುಂಪಲ