
ಕುಸುಮಾ ವಜ್ರ ಕುಮಾರ್ ರವರ ಕವನ "ಆಯ್ಕೆ"
Friday, January 14, 2022
ಆಯ್ಕೆ
----------
ಅವನ ಸೃಷ್ಟಿಯಲಿ
ನಿನ್ನ ದೃಷ್ಟಿ ಯಾವುದೋ ಮನುಜ
ಕತ್ತಲಿನ ಅರಿವೋ..
ಬೆಳಕಿನ ಒಲವೋ..
ಅವನಸ್ತಿತ್ವದಲಿ ಬಿಳಿಚುಕ್ಕೆ ನಾವಾಗಿರಲು
ಛಲದ ಚರಿತ್ರೆಯಲ್ಲಿ ಬಲದ ಗೆಲುವೋ?
ಸೋಲನೆಂಬ ಸೊಪ್ಪತ್ತಿನ ಸೋಗೋ?
ನಶ್ವರ ಬದುಕ ಈ ಬಂಡಿಯಲಿ
ನಿನದಾವುದೋ ಆಯ್ಕೆ ಮನುಜ?
ಗಾಳಿ ತುಂಬಿದ ಗಾಲಿಯೋ?
ಗಾಳಿಯಿಲ್ಲದ ಗಾಲಿಯೋ?
****""""""""""""""""""""""""""""
ಕುಸುಮಾ ವಜ್ರಕುಮಾರ್
ಸಹಶಿಕ್ಷಕಿ
ಸ್ಟಾರ್ ಲೈನ್ ಇಂಗ್ಲಿಷ್ ಸ್ಕೂಲ್
ಮಂಜೊಟ್ಟಿ - ಬೆಳ್ತಂಗಡಿ
ದಕ್ಷಿಣ ಕನ್ನಡ.