ಜಯಲಕ್ಷ್ಮಿ ಕುಂಪಲ ರವರ ಕವನ ಅಮ್ಮನ ಮಡಿಲು
Sunday, January 2, 2022
ಕವನ...
🌹 ಅಮ್ಮನ ಮಡಿಲು🌹
ಅಮ್ಮನ ಮಡಿಲಿದು ಮಮತೆಯ ಒಡಲು
ಅಮ್ಮನ ಬಿಸಿಯಪ್ಪುಗೆ ಕರುಣೆಯ ಕಡಲು
ಅಮ್ಮನ ಪ್ರತಿ ನುಡಿ ಗೆಲುವಿನ ಮೆಟ್ಟಿಲು
ಅಮ್ಮನ ನಗುವಿದು ಸ್ವರ್ಗಕ್ಕೆ ಬಾಗಿಲು
ತನ್ನ ಕನಸುಗಳನ್ನೆಲ್ಲ ಮೆಟ್ಟಿನಿಲ್ಲುವಳು
ಸುಜ್ಞಾನದ ದೀಪವನು ಬೆಳಗಿಸುವಳು
ಮನದ ಅಂಧಕಾರವ ತೊಲಗಿಸುವಳು
ಮಕ್ಕಳ ಏಳಿಗೆಯಲ್ಲಿ ಸುಖವ ಕಾಣುವಳು
ನಮ್ಮೆಲ್ಲರ ಜೀವನಕ್ಕೆ ನೀ ಸ್ಫೂರ್ತಿಯ ಸೆಲೆ
ತೋರಿಸು ನನ್ನ ಕನಸಿಗೆ ಸರಿಯಾದ ನೆಲೆ
ನೀನಿಲ್ಲದಿರುವ ಬಾಳಿಗಿದೆ ಏನು ಬೆಲೆ
ಬಾಳೆಂಬ ಗುಡಿಯಲಿ ನೀ ಜೀವಂತ ಶಿಲೆ
#######################
ಜಯಲಕ್ಷ್ಮಿ ಜಿ ಕುಂಪಲ
ಸರಕಾರಿ ಪ್ರೌಢಶಾಲೆ ಕಲ್ಲರಕೋಡಿ ಬಂಟ್ವಾಳ..
ದಕ್ಷಿಣ ಕನ್ನಡ