ಜಯಲಕ್ಷ್ಮಿ ಯವರ ನ್ಯಾನೋ ಕಥೆ - ಇಮೋಜಿ
Friday, January 7, 2022
ನ್ಯಾನೋ ಕತೆ.....
😭ಇಮೋಜಿ😭
ಮೇಘ ಎಂಟನೇ ತರಗತಿಯಲ್ಲಿ ಓದುತ್ತಿದ್ದ ಅತಿ ಚುರುಕಾದ ಹುಡುಗಿ .ಎಲ್ಲಾ ವಿಷಯಗಳಲ್ಲಿ ಎತ್ತಿದ ಕೈ .ಯಾವುದೇ ಸಂಶಯ ವಿರಲಿ, ಅಂಜಿಕೆಯಿಲ್ಲದೆ ಫೋನ್ ಮಾಡುತ್ತಿದ್ದಳು .ವಾಯ್ಸ್ ಮೆಸೇಜ್ ಮಾಡಿ ಸಂಶಯ ನಿವಾರಣೆ ಮಾಡಿಕೊಳ್ಳುತ್ತಿದ್ದಳು.ಕೊರೋನ ಅಲೆಗೆ ಶಾಲಾ ಚಟುವಟಿಕೆಗಳು ನಿಂತಾಗ ತುಂಬಾ ಬೇಸರಪಟ್ಟುಕೊಂಡಳು . ಪ್ರತಿನಿತ್ಯ ಯಾವಾಗ ಶಾಲೆ ಪ್ರಾರಂಭ, ಯಾವಾಗ ಪರೀಕ್ಷೆ ಟೀಚರ್ ಎಂದು ಕೇಳುತ್ತಿದ್ದಳು." ಗೊತ್ತಿಲ್ಲ " ಮುಂದೆ ತಿಳಿಸುತ್ತೇನೆ ಎಂದು ಫೋನ್ ಸಂದೇಶ ಕಳುಹಿಸುವಾಗ ಅವಳ ಅಳುವಿನ ಇಮೋಜಿ ನೋಡಿ ನನ್ನ ಕಣ್ಣಿನಲ್ಲಿ ಒಂದು ಹನಿ ಕಣ್ಣೀರು ಕೆಳಗೆ ಬಿತ್ತು..
ಜಯಲಕ್ಷ್ಮಿ ಜಿ ಕುಂಪಲ...
ಆನ್ ಲೈನ್ ನ್ಯಾನೋ ಕಥೆ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಕಥೆ