-->
ಜೋಳಿಗೆಯೊಂದಿಗೆ ವಿ ಸುಬ್ರಹ್ಮಣ್ಯ ಭಟ್ ರವರ ಮಾತು *ಹವ್ಯಾಸದಿಂದ ವ್ಯಕ್ತಿತ್ವ ವಿಕಸನ

ಜೋಳಿಗೆಯೊಂದಿಗೆ ವಿ ಸುಬ್ರಹ್ಮಣ್ಯ ಭಟ್ ರವರ ಮಾತು *ಹವ್ಯಾಸದಿಂದ ವ್ಯಕ್ತಿತ್ವ ವಿಕಸನ


ಮಕ್ಕಳು ತಮ್ಮ ಕಲಿಕಾ ಅವಧಿಯಲ್ಲಿ ಪಾಠ-ಪ್ರವಚನದ ಜೊತೆಗೆ ಪಾಠೇತರ ಚಟುವಟಿಕೆಗಳಲ್ಲಿ ಆಸಕ್ತಿ ಇರಿಸಿಕೊಂಡು ಸ್ವತಃ ಹವ್ಯಾಸವಾಗಿರಿಸಿಕೊಂಡರೆ ಅವರಿಗೆ ಬೇರೆ ಬೇರೆ ವಿಧದಲ್ಲಿ ಸಹಾಯಕವಾಗುತ್ತದೆ. ಕನಿಷ್ಠ ಒಂದೆರಡು ಹವ್ಯಾಸಗಳನ್ನು ರೂಢಿಸಿಕೊಂಡರೆ ಸಾಕು.ವಿದ್ಯಾರ್ಥಿಗಳು ಯಾವ ಹವ್ಯಾಸವನ್ನು ಕರಗತಮಾಡಿಕೊಳ್ಳಬೇಕು ಎಂದು ಕೆಲವರಿಗೆ ಪ್ರಶ್ನೆ ಮೂಡುವುದು ಸಹಜ.ಆಗ ಅವರವರ ಆಸಕ್ತಿಗೆ ಅನುಗುಣವಾಗಿ ಹಿರಿಯರು/ಶಿಕ್ಷಕರು ಅಥವಾ ಕೆಲವೊಮ್ಮೆ ಸ್ನೇಹಿತರು ಮಾರ್ಗದರ್ಶನ ಮಾಡಬಹುದು.ಉದಾಹರಣೆಗೆ,ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬನಿಗೆ ಪ್ರಾಸ ರೂಪದಲ್ಲಿ ಪದ್ಯ ಬರೆಯುವ ಸಾಮರ್ಥ್ಯವಿದೆಯೆಂದು ತಿಳಿದುಕೊಂಡರೆ,ಆ ವಿದ್ಯಾರ್ಥಿಗೆ ಸೂಕ್ತ ಮಾರ್ಗದರ್ಶನ ಅಥವಾ ಚಿಕ್ಕ ಪ್ರೋತ್ಸಾಹ ಸಿಕ್ಕರೂ ಸಾಕು ಅವನೊಬ್ಬ ಕವಿಯಾಗಬಲ್ಲ.ಚಿತ್ರವನ್ನು ಬರೆಯುವ ಆಸಕ್ತ ಮಗುವಿಗೆ ಹಾಳೆ ಮತ್ತು ಬಣ್ಣದ ಪೆನ್ಸಿಲ್ ತಂದುಕೊಟ್ಟು ತಂದೆ ಪ್ರೋತ್ಸಾಹಿಸಿದರೆ ಸಾಕು,ಮುಂದೆ ಅವನು ಒಳ್ಳೆಯ ಚಿತ್ರ ಕಲಾವಿದನಾಗಬಲ್ಲ.
      ಹವ್ಯಾಸಗಳಲ್ಲಿ ನಾನಾ ಬಗೆಗಳಿವೆ.ಅದು ಅವರವರ ಆಸಕ್ತಿ ಮತ್ತು ಅಭಿರುಚಿಗೆ ಬಿಟ್ಟದ್ದು .
ಉತ್ತಮವಾದದ್ದು ಹವ್ಯಾಸವಾದರೆ,ಕೆಟ್ಟದ್ದು ಅಭ್ಯಾಸ ಎಂದು ಕರೆಯಬಹುದು,ಕರೆಯುತ್ತೇವೆ.

ವಿದ್ಯಾರ್ಥಿಗಳು ಹವ್ಯಾಸವನ್ನು ಏಕೆ ರೂಢಿಸಿಕೊಳ್ಳಬೇಕು?ಅದರಿಂದ ಅವರಿಗಾಗುವ ಲಾಭಗಳಾದರೂ ಏನು?ಅವರು ಎಂತಹ ಹವ್ಯಾಸವನ್ನು ಕರಗತಮಾಡುಕೊಂಡರೆ ಹೆಚ್ಚು ಲಾಭ?ಎಂಬಿತ್ಯಾದಿ ಪ್ರಶ್ನೆಗಳಿಗೆ ಇಂತಹುದೇ ಒಳ್ಳೆಯದು ಎಂದು ಹೇಳುವಂತಿಲ್ಲ.ಆದರೂ ಬರವಣಿಗೆಯ ಹವ್ಯಾಸದಿಂದ ಏನೇನು ಪ್ರಯೋಜನ ಎಂಬುದಾಗಿ ಸ್ವಲ್ಪ ಗಮನಿಸೋಣ.

ಕತೆ,ಕವನ,ಲೇಖನ ಬೆರೆಯುವ ಹವ್ಯಾಸವು ವಿದ್ಯಾರ್ಥಿಯನ್ನು ಕವಿ ಸಾಹಿತಿಯನ್ನಾಗಿ ಮಾಡಬಲ್ಲುದು.ಅವನನ್ನು ಒಳ್ಳೆಯ ಜ್ಞಾನಿಯನ್ನಾಗಿಸುವುದು.ಆ ಬರಹಗಾರ ಅಥವಾ ಕವಿ ಸಮಾಜದಲ್ಲಿ ಒಬ್ಬ ಗೌರವಾನ್ವಿತ ವ್ಯಕ್ತಿಯಾಗುವನು."ಅಳೆಯುವುದು ಕಾಯ ಉಳಿಯುವುದು ಕೀರ್ತಿ "ಎಂಬಂತೆ,ಶ್ರೇಷ್ಠ ಕವಿ ಸಾಹಿತಿಯೆನಿಸಿದವನ ಹೆಸರು ಆಚಂದ್ರಾರ್ಕ ಶಾಶ್ವತವಾಗುತ್ತದೆ.

ಸಾಹಿತ್ಯ ಅಥವಾ ಬರವಣಿಗೆಯಲ್ಲಿ ತೊಡಗಿಕೊಂಡ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನವಾಗುತ್ತದೆ.ತಾನು ಸದಾ ಆತ್ಮತೃಪ್ತಿ ಹೊಂದಿದವನಾಗುತ್ತಾನೆ.ಸಜ್ಜನಿಕೆ ,ಪ್ರಾಮಾಣಿಕತೆ,ವಿನಯಶೀಲತೆ,ದಕ್ಷತೆಯೇ ಮುಂತಾದ ಆದರ್ಶದ ಗುಣಗಳು ಕರಗತವಾಗುತ್ತದೆ.ಅಂತಹ ವಿದ್ಯಾರ್ಥಿ ಭವಿಷ್ಯದಲ್ಲಿ ಒಳ್ಳೆಯ ಉದ್ಯೋಗವನ್ನು ಪಡೆದು ತನ್ನ ಸೇವಾ ಕ್ಷೇತ್ರದಲ್ಲಿ ಸೈ ಸೈ ಎನ್ನಿಸಿಕೊಳ್ಳುತ್ತಾನೆ.ತನ್ನ ಬದುಕಿನಲ್ಲಿ ಯಾವುದೇ ರೀತಿಯ ಕ್ಲಿಷ್ಟ ಪರಿಸ್ಥಿತಿ ಎದುರಾದಗಲೂ ಅದನ್ನು ನಿಭಾಯಿಸಲು ಸಮರ್ಥನಾಗುತ್ತಾನೆ.



ವಿ ಸುಬ್ರಹ್ಮಣ್ಯ ಭಟ್
ಉಪನ್ಯಾಸಕರು
ತುಂಬೆ ಪದವಿ ಪೂರ್ವ ಕಾಲೇಜು
ತುಂಬೆ
         

Ads on article

Advertise in articles 1

advertising articles 2

Advertise under the article