-->
ಏಕ್ ಭಾರತ್ ಶ್ರೇಷ್ಠ್ ಭಾರತ್ - ಪ್ರತಿಮಾ ಹೆಬ್ಬಾರ್

ಏಕ್ ಭಾರತ್ ಶ್ರೇಷ್ಠ್ ಭಾರತ್ - ಪ್ರತಿಮಾ ಹೆಬ್ಬಾರ್





ಏಕತೆಯ ಪ್ರತಿಮೆ
      ಪ್ರಪಂಚದ ಅತಿ ಎತ್ತರದ ಪ್ರತಿಮೆ ಗುಜರಾತಿನ ನರ್ಮದ ಜಿಲ್ಲೆಯ ಸಾಧು ಬೆಟ್ ನಲ್ಲಿರುವ 182 ಮೀಟರ್ ಪ್ರಪಂಚದಲ್ಲಿಯೇ ಎತ್ತರದ ಪ್ರತಿಮೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರದು.
ಸರ್ದಾರ್ಜಿ ದೇಶದ ಮೊದಲ ಉಪಪ್ರಧಾನಿ. ಭಾರತದ ಅಖಂಡತೆಯನ್ನು ಸ್ಥಾಪಿಸಲು ಕಾರಣವಾದ ಇವರು ಭಾರತೀಯರ ಪಾಲಿಗೆ ಪ್ರಾತ: ಸ್ಮರಣಿಯರು .ಭಾರತವನ್ನು ಒಗ್ಗೂಡಿಸುವ ಮಹತ್ಕಾರ್ಯ ಸರ್ದಾರ್ಜಿ ಅವರಿಂದ ಮಾತ್ರ ಸಾಧ್ಯ ಎಂಬುದನ್ನು ಗಾಂಧೀಜಿಯವರೂ ಮನಗಂಡಿದ್ದರು .
ಸರ್ದಾರ್ಜಿ ಭಾರತದ ಪ್ರಜೆಗಳ ಭವಿಷ್ಯದ ಭದ್ರಬುನಾದಿ ಗಾಗಿ ತಮ್ಮ ರಾಜ್ಯಗಳನ್ನು ಭಾರತಕ್ಕೆ ಬಿಟ್ಟುಕೊಡುವಂತೆ ಸುಮಾರು 565 ರಾಜರುಗಳಿಗೆ ಮನದಟ್ಟು ಮಾಡಿ ಭಾರತದಲ್ಲಿ ವಿಲೀನಗೊಳಿಸಿದರು.
ಆದರೆ ಕಾಶ್ಮೀರ ,ಹೈದರಾಬಾದ್ ಹಾಗೂ ಜುನಾಘಢ ಗಳನ್ನು ಒಪ್ಪಿಸುವುದು ಸುಲಭದ ಮಾತಾಗಿರಲಿಲ್ಲ. ಅದಾಗ್ಯೂ ಪಟೇಲರು ಸೇನೆಯ ಸಹಾಯದಿಂದ ಈ ಮೂರು ರಾಜ್ಯಗಳನ್ನು ಭಾರತದ ಒಕ್ಕೂಟದಲ್ಲಿ ಸೇರಿಸಿ ಭಾರತದ ಏಕೀಕರಣಕ್ಕೆ ಕಾರಣರಾದರು.
    ಭಾರತದ ಒಗ್ಗೂಡಿಸುವಿಕೆ ಸುಲಭದ ಮಾತಾಗಿರಲಿಲ್ಲ. ಪಟೇಲರ ದೂರದೃಷ್ಟಿ ,ದೃಢತೆ ಇವೆಲ್ಲದರ ಫಲವೇ ಇಂದಿನ ಅಖಂಡ ಭಾರತ.
ನಾನು ಇತ್ತೀಚೆಗೆ ಗುಜರಾತಿನ ಏಕತಾ ಪ್ರತಿಮೆಯನ್ನು ನೋಡಿದಾಗ ನಿಜವಾಗಿಯೂ ಪಟೇಲರ ಮೇಲಿನ ಶ್ರದ್ಧೆ ಗೌರವ ಆನಂದಭಾಷ್ಪವಾಗಿ ಹರಿಯಿತು.
ಸ್ವತಂತ್ರ ಭಾರತದ ಏಕೀಕರಣದ ಕಾರಣಕರ್ತ ಸರ್ದಾರ್ಜಿಯ ಪ್ರತಿಮೆ ನಿಜವಾಗಿಯೂ ಅತ್ಯದ್ಭುತ.
185 ಟನ್ ಕಂಚು 24,000 ಉಕ್ಕು ಬಳಸಲಾಗಿದೆ .ಇದರ ಬಳಿಯೇ ವಾಲ್ ಆಫ್ ಯುನಿಟಿ ವಸ್ತುಸಂಗ್ರಹಾಲಯ, ವ್ಯೂವರ್ಸ್ ಗ್ಯಾಲರಿ ,17 ಕಿಲೋಮೀಟರ್ ಉದ್ದದ ಫ್ಲವರ್ ವ್ಯಾಲಿ ಕೂಡ ನಿರ್ಮಿಸಲಾಗಿದೆ .ಇದರ ನಿರ್ಮಾಣಕ್ಕಾಗಿ 3000 ಕಾರ್ಮಿಕರು 300 ಹಗಲಿರುಳೆನ್ನದೆ ದುಡಿದಿದ್ದಾರೆ ಈ ಪ್ರತಿಮೆ ಏಳು ಕಿಲೋಮೀಟರ್ ದೂರದಿಂದಲೇ ಬರಿಗಣ್ಣಿಗೆ ಗೋಚರಿಸುವ ಆನಂದ ವರ್ಣಿಸಲಸದಳ. ಅಹಮದಾಬಾದ್ ಪ್ರವಾಸದ ವೇಳೆ ಇಲ್ಲಿಗೆ ಭೇಟಿ ನೀಡಿರುವುದು ನನ್ನ ಸುಕೃತ ಫಲವೇ ಸರಿ .ಉಕ್ಕಿನ ಮನುಷ್ಯರೆಂದೇ ಪ್ರಸಿದ್ಧರಾದ ಅವರ ಸಾಧನೆ ಜೀವನಕ್ರಮ ನಮಗೆಲ್ಲರಿಗೂ ಆದರ್ಶ.
ನಾವೆಲ್ಲಾ ಭಾರತೀಯರು ನಮ್ಮಲ್ಲಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಅಳಿಸಿ ಮತ್ತೊಮ್ಮೆ ನಮ್ಮ ನೆಲೆಗಳಲ್ಲಿ, ಏಕತೆಯ ಸೂತ್ರದಡಿಯಲ್ಲಿ ಭಾರತವನ್ನು ಪೋಣಿಸುವ ಕೆಲಸ ಮಾಡಬೇಕಾಗಿದೆ ಅಖಂಡ ಭಾರತವೇ ನಮ್ಮ ಶಕ್ತಿ
"ಏಕ್ ಭಾರತ್ ಶ್ರೇಷ್ಠ ಭಾರತ್"
                  ಜೈ ಹಿಂದ್



*******************
ಪ್ರತಿಮಾ ಹೆಬ್ಬಾರ್
ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಗಂಬಿಲ
***************“"""""""""""""""""

Ads on article

Advertise in articles 1

advertising articles 2

Advertise under the article