-->
ಜೋಳಿಗೆ ಯೊಂದಿಗೆ ಮಾತಿನಲ್ಲಿ ಜಯಲಕ್ಷ್ಮೀ ಕುಂಪಲ

ಜೋಳಿಗೆ ಯೊಂದಿಗೆ ಮಾತಿನಲ್ಲಿ ಜಯಲಕ್ಷ್ಮೀ ಕುಂಪಲ





*ಸಮಯ ನಿರ್ವಹಣೆಯ ಕಲೆ...ಜೀವನದ ಯಶಸ್ಸಿನ ಸೆಲೆ*


"ನನಗೆ ಸಮಯ ಎಷ್ಟು ಇದ್ದರೂ ಸಾಕಾಗುವುದಿಲ್ಲ"....
 ಇದು ಪ್ರತಿಯೊಬ್ಬರು ಆಡುವ ಸಾಮಾನ್ಯವಾದ ಮಾತು...
ಹಾಗಾದರೆ ದಿನದಲ್ಲಿ ಇರುವ 24 ಗಂಟೆಗಳು ನಮಗೆ ಸಾಕಾಗುವುದಿಲ್ಲವೇ ???  ಇದು ಎಲ್ಲರ ಮನಸ್ಸಿನಲ್ಲಿ ಮೂಡುವ ಪ್ರಶ್ನೆ... 
ಸಮಯ ನಮ್ಮ ಹಿಂದೆ ಬರುವುದಿಲ್ಲ ನಾವು ಸಮಯದ ಜೊತೆಗೆ ಹೋಗಬೇಕು... 
ಸಮಯವನ್ನು ಸರಿಯಾದ ರೀತಿಯಲ್ಲಿ ಕ್ರಮಬದ್ಧವಾಗಿ ಉಪಯೋಗಿಸಿದರೆ ಸಮಯ ಸಾಕಾಗದೇ ಎಲ್ಲಿಗೆ ಹೋಗುತ್ತದೆ ಅಲ್ಲವೇ.....??

ನಮ್ಮ  ಜೀವನದಲ್ಲಿ ಸಮಯದ ನಿರ್ವಹಣೆ ಕೂಡ ಒಂದು ಕಲೆ..  ಇರುವ ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸದುಪಯೋಗಪಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧ್ಯ... ಮುಖ್ಯವಾಗಿ ಶಾಲಾ ವಿದ್ಯಾರ್ಥಿಗಳು ಸಮಯದ ನಿರ್ವಹಣೆಯನ್ನು ಸರಿಯಾಗಿ ಮಾಡಿದರೆ ವಿದ್ಯಾರ್ಥಿಯು ಜೀವನದಲ್ಲಿ ಯಶಸ್ಸು ಕಾಣುವುದರಲ್ಲಿ ಎರಡು ಮಾತಿಲ್ಲ.. 
ಸಮಯ ಯಾವತ್ತೂ ನಿಲ್ಲುವುದಿಲ್ಲ. ಅದು ಓಡುತ್ತಿರುತ್ತದೆ. ವಿದ್ಯಾರ್ಥಿ ಜೀವನದಲ್ಲಂತೂ ಸಮಯಪಾಲನೆ ತುಂಬಾ ಮುಖ್ಯ... ಬೆಳಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ವಿದ್ಯಾರ್ಥಿಗಳು ಸಮಯವನ್ನು ಹೊಂದಿಸಿಕೊಳ್ಳುವುದು ಮುಖ್ಯ. ಹೀಗೆ ಮಾಡಿದರೆ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಕಾಲೇಜು ಜೀವನದಲ್ಲಿ ಎಷ್ಟೋ ವಿದ್ಯಾರ್ಥಿಗಳು ಸಮಯದ ಅರಿವಿಲ್ಲದೇ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಂಡದ್ದನ್ನು ಕಂಡಿದ್ದೇವೆ.. ಉದ್ಯೋಗ ಹುಡುಕುವ ಸಂದರ್ಭದಲ್ಲಿ ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪಪಟ್ಟದ್ದು ಇದೆ.

ವಿದ್ಯಾರ್ಥಿಗಳು ಶಾಲೆಯ ಕೆಲಸಕಾರ್ಯಗಳನ್ನು ಸರಿಯಾದ ಸಮಯಕ್ಕೆ  ನಿರ್ವಹಿಸಲು ವೇಳಾಪಟ್ಟಿಯನ್ನು ನಿಗದಿಪಡಿಸಿ ಕೊಳ್ಳಬೇಕು...  ವೇಳಾಪಟ್ಟಿಯಲ್ಲಿ ಪ್ರತಿಯೊಂದು ವಿಷಯಕ್ಕೂ ಸರಿಯಾದ ಕ್ರಮದಲ್ಲಿ ಸಮಯ ನಿಗದಿಪಡಿಸಿಕೊಂಡು ಓದಿಕೊಂಡರೆ ಆ ವಿಷಯದಲ್ಲಿ ಉತ್ತಮ ಅಂಕಗಳನ್ನು ಗಳಿಸುವುದರಲ್ಲಿ ಸಂಶಯವಿಲ್ಲ.. 
ಪ್ರತಿನಿತ್ಯ ಪಾಠಗಳನ್ನು ಓದುವುದರಿಂದ ಪರೀಕ್ಷಾ ಸಮಯದಲ್ಲಿ ಯಾವುದೇ ತೊಂದರೆಗಳು ಉಂಟಾಗದೆ ಪರೀಕ್ಷೆಯನ್ನು  ಧೈರ್ಯದಿಂದ ಎದುರಿಸಲು ಸಾಧ್ಯವಾಗುತ್ತದೆ.. ಸಮಯ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ಪಾಲಿಸಿದರೆ ಜೀವನದ ಗುರಿಯನ್ನು  ತಲುಪಲು ಯಾವುದೇ ಅಡೆತಡೆಗಳು ಉಂಟಾಗುವುದಿಲ್ಲ..

ಬಿಡುವಿನ  ವೇಳೆಯಲ್ಲಿ ಜೀವನಕ್ಕೆ ಅಗತ್ಯವಾದ ಕರಕುಶಲ ವಸ್ತುಗಳ ತಯಾರಿ ನೃತ್ಯ,ಸಂಗೀತ, ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಂಡು ಸಮಯದ ಸದುಪಯೋಗ ಮಾಡಿದರೆ ಮನಸ್ಸಿಗೆ ಉಲ್ಲಾಸ, ನೆಮ್ಮದಿಯೂ ಸಿಗುತ್ತದೆ
ಆಧುನಿಕ ತಂತ್ರಜ್ಞಾನ ಬೆಳೆದಂತೆ ಎಲ್ಲರ ಕೈಗಳಲ್ಲಿ ಮೊಬೈಲ್, ಕಂಪ್ಯೂಟರ್ ಬಂದು ಸಮಯ ಹಾಳು ಮಾಡುವುದು ಸಾಮಾನ್ಯವಾಗಿದೆ... ಪಠ್ಯಕ್ಕೆ ಸಂಬಂಧ ಪಡದಿರುವ ಹಾಗೂ ಜೀವನದಲ್ಲಿ ಉಪಯೋಗಕ್ಕೆ ಬಾರದಿರುವಂತಹ ಗೇಮ್ಸ್ ವೀಡಿಯೋಗಳನ್ನು ನೋಡುವ ಮೂಲಕ ವಿದ್ಯಾರ್ಥಿಗಳು ಸಮಯವನ್ನು ಹಾಳು ಮಾಡುವುದನ್ನು ಕಡಿಮೆ ಮಾಡಬೇಕು... ಸಾಮಾಜಿಕ ಜಾಲತಾಣಗಳ ಸರಿಯಾದ ಬಳಕೆಯನ್ನು ಮಾಡುವುದನ್ನು ವಿದ್ಯಾರ್ಥಿಗಳು ತಿಳಿದಿರಬೇಕು..

 ಪ್ರತಿಯೊಂದು ವಿಷಯಕ್ಕೂ ಇಂತಿಷ್ಟೇ ಸಮಯವನ್ನು ನಿಗದಿಪಡಿಸುವ ಮೂಲಕ ಸಮಯದ ಸರಿಯಾದ ನಿರ್ವಹಣೆಯನ್ನು ಮಾಡಬಹುದು...
ಸಮಯವು ಜೀವನದಲ್ಲಿ ಅಮೂಲ್ಯವಾದದ್ದು.... ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಅದು ನಮ್ಮ ಜೀವನದ ಯಶಸ್ಸಿಗೆ ನಾಂದಿಯಾಗಬಹುದು....



ಜಯಲಕ್ಷ್ಮಿ ಜಿ ಕುಂಪಲ
ಸರಕಾರಿ ಪ್ರೌಢಶಾಲೆ ಕಲ್ಲರಕೋಡಿ ಬಂಟ್ವಾಳ..

Ads on article

Advertise in articles 1

advertising articles 2

Advertise under the article