ಬಿ ಎಂ ತುಂಬೆ ಅವರಿಂದ ಜೋಳಿಗೆ ಗಾಗಿ ಮಾತು
Sunday, December 5, 2021
ಮಕ್ಕಳ ಜೋಳಿಗೆಯಿಂದ ಮಕ್ಕಳ ಕನಸುಗಳಿಗೆ ಬಣ್ಣ ತುಂಬುವ ಕೆಲಸ ನಡೆಯುತ್ತಿದೆ ಅಭಿನಂದನೆಗಳು.
ಪ್ರಿಯ ವಿದ್ಯಾರ್ಥಿಗಳೆ,
ಆರಂಭದಲ್ಲಿ ನಿಮ್ಮ ಭಾಷೆಯ ಅಭಿವ್ಯಕ್ತಿ ಯಾಗುವುದೇ ಗೀಚುವಿಕೆಯಿಂದ. ಅದರಿಂದಲೇ ಚಿತ್ರಕಲೆ ಆರಂಭವಾಗುತ್ತದೆ ಚಿತ್ರಕಲೆಯಿಂದ ಮಾನಸಿಕ ಮತ್ತು ಭೌತಿಕವಾಗಿ ಬೆಳವಣಿಗೆಯಾಗುತ್ತದೆ. ಮನಸ್ಸಿನ ಭಾವನೆಗಳನ್ನು ಸೃಜನಾತ್ಮಕವಾಗಿ ಸೃಷ್ಟಿಸಲು ಕಲೆಯು ಒಂದು ಸುಲಭ ಮಾಧ್ಯಮ ವಾಗಿದೆ. ವಿದ್ಯಾರ್ಥಿಗಳು ಪಾಠದ ಜತೆಯಲ್ಲಿ ಚಿತ್ರಕಲೆಯನ್ನು ಕರಗತ ಮಾಡಿಕೊಂಡಲ್ಲಿ ಏಕಾಗ್ರತೆ ಮತ್ತು ಶಿಸ್ತುಬದ್ಧ ಶಿಕ್ಷಣದ ಕಲಿಕೆಯಾಗುತ್ತದೆ. ಉತ್ತಮ ಯೋಚನೆಗಳು ಸೃಜನಾತ್ಮಕ ವಾಗಿ ಸೃಷ್ಟಿ ಗೊಂಡಾಗ ವ್ಯಕ್ತಿತ್ವದ ವಿಕಸನವಾಗುತ್ತದೆ.
ಶ್ರೀಯುತ ಬಿ ಎಂ ರಫೀಕ್ ತುಂಬೆಯವರು ಪ್ರಾರಂಭ ಮಾಡಿದ ಈ ಮಕ್ಕಳ ಜೋಳಿಗೆಯನ್ನು ಭರಿಸುವ ಕೆಲಸ ನಿಮ್ಮಂತಹ ಬೆಳೆಯುವ ಪ್ರತಿಭೆಗಳಿಂದ ನಡೆಯಬೇಕಾಗಿದೆ.ಈ
ಈ ವೇದಿಕೆಯು ಈಗ ಮೊದಲ ಹೆಜ್ಜೆಯನ್ನು ಮಾತ್ರ ಇಟ್ಟಿದೆ ,ಈಗ ನಿಮಗೆ ಪ್ರಶಸ್ತಿ ಗಳು ಬಹುಮಾನಗಳು ಸಿಗದೇ ಇರಬಹುದು ಆದರೆ ನಿಮ್ಮೊಳಗೂ ಓರ್ವ ಕಲಾವಿದ ಅಡಗಿಕೊಂಡಿದ್ದಾನೆಂದು ಸಾಮಾಜಿಕ ಜಾಲತಾಣದಲ್ಲಿ
ನೀವು ಪರಿಚಯವಾಗುತ್ತಿರಿ. ನಿಮ್ಮಿಂದ ಉತ್ತಮ ಕಲಾಕೃತಿಗಳು ಹೊರಬರಲಿ ,ನೀವು ತೊಡಗಿಸಿಕೊಂಡು ನಿಮ್ಮ ಸ್ನೇಹಿತರನ್ನು ಸೇರಿಸಿಕೊಳ್ಳಿ,
ವಂದನೆಗಳು
ಬಿ ಮೊಹಮ್ಮದ್ ತುಂಬೆ